ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಮುಂದೆ ರಸ್ತೆ ಅಗೆದವರೇ ರಿಪೇರಿ ಮಾಡಿಸಬೇಕು: ಬಿಬಿಎಂಪಿ ಖಡಕ್ ಆದೇಶ

ಬೆಂಗಳೂರು: ಸುಂಕದಕಟ್ಟೆ ದ್ವಿಚಕ್ರ ವಾಹನ ಚಾಲಕಿ ಸಾವು ಪ್ರಕರಣದ ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ ಇನ್ಮುಂದೆ ರಸ್ತೆ ಅಗೆದವರೇ ರಸ್ತೆ ರಿಪೇರಿ ಮಾಡಿಸುವ ಹೊಣೆಯನ್ನು ಹೊಂದಿರುತ್ತಾರೆ ಎಂದು ಆದೇಶಿಸಿದೆ.

ಈ ಮೂಲಕ ಜಲಮಂಡಳಿ ಪೈಪ್ ಲೈನ್, ಬೆಸ್ಕಾಂ ಕಾಮಗಾರಿ ಹೀಗೆ ಯಾವುದೇ ವಿಚಾರವಾಗಿ ಯಾರೇ ರಸ್ತೆ ಅಗೆದರೂ ರಸ್ತೆ ರಿಪೇರಿ ಹೊಣೆ ಮತ್ತು ಏನೇ ಅಪಘಾತ, ಅನಾಹುತಗಳಾದರೂ ಸಂಬಂಧಿಸಿದವರೇ ಹೊಣೆಯಾಗಿರುತ್ತಾರೆ ಎಂದು ಬಿಬಿಎಂಪಿ ಸೂಚಿಸಿದೆ.

ನಾಯಂಡಹಳ್ಳಿಯಲ್ಲಿ ಸೋಮವಾರ ಮಹಿಳೆಯೊಬ್ಬಳು ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ಬಿಬಿಎಂಪಿ ಕಸದ ಲಾರಿ ಹರಿದು ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಂಭವಿಸಿತ್ತು. ಕಸದ ಲಾರಿಯಿಂದಾಗಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಘನ ತ್ಯಾಜ್ಯ ವಿಲೇವಾರಿ ವಾಹನಗಳ ಕ್ರಮಬದ್ಧ ತಪಾಸಣೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಎಲ್ಲಾ ಕಾಂಪ್ಯಾಕ್ಟರ್, ಟಿಪ್ಪರ್‌ಗಳು ಫಿಟ್ ನೆಸ್ ಸರ್ಟಿಫಿಕೇಟ್ ಹೊಂದಿರಬೇಕು. ಕಸದ ವಾಹನಗಳ ವೇಗ ನಿಯಂತ್ರಕಗಳನ್ನು ಅಳವಡಿಸಿರಬೇಕು ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

19/04/2022 06:02 pm

Cinque Terre

21.92 K

Cinque Terre

0

ಸಂಬಂಧಿತ ಸುದ್ದಿ