ಬೆಂಗಳೂರು: ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಅಸಂವಿಧಾನಿಕ, ಜೊತೆಗೆ ಕೆಲವರು ತೀರ್ಪನ್ನು ಮತ್ತು ನ್ಯಾಯಾಧೀಶರನ್ನು ನಿಂದಿಸಿದ್ದಾರೆ ಇದು ನ್ಯಾಯಾಂಗ ನಿಂದನೆ. ಆದ್ದರಿಂದ ಇವ್ರ ಮೇಲೆ ಸುಮೋಟೊ ಕೇಸ್ ದಾಖಲಿಸಬೇಕು ಎಂದು ವಕೀಲ ಅಮೃತೇಶ್, ಸಿ.ಜೆ.
ಅವರಿಗೆ ಮನವಿ ಮಾಡಿದ್ದಾರೆ.
ತೀರ್ಪು ಹಿನ್ನೆಲೆಯಲ್ಲಿ ಕೆಲ ಸಂಘಟನೆಗಳ ವ್ಯಕ್ತಿಗಳು ಟೀಕಿಸುವ ಭರದಲ್ಲಿ ನ್ಯಾಯಾಂಗ ವ್ಯವಸ್ಥೆ ವಿರುದ್ಧ ಮಾತನಾಡುತ್ತಿದ್ದಾರೆ. ನ್ಯಾಯಮೂರ್ತಿಗಳಿಗೆ ಒತ್ತಡ ಬಂದಿತ್ತು ಎಂಬಂತಹ ಮಾತು ಆಡುತ್ತಿದ್ದಾರೆ. ತೀರ್ಪು ನೀಡಿದ ಜಡ್ಜ್ ಗಳಿಗೂ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಬೆಳವಣಿಗೆ ಸರಿಯಲ್ಲ. ಒಂದು ವೇಳೆ ಸುಮೋಟೊ ಕೇಸ್ ದಾಖಲಿಸದಿದ್ದರೆ ಕೇಸ್ ದಾಖಲಿಸಲು ಅನುಮತಿ ನೀಡುವಂತೆ ಅಮೃತೇಶ್, ಸಿ.ಜೆ. ಅವರಲ್ಲಿ ವಿನಂತಿಸಿದ್ದಾರೆ.
ಸ್ಲಗ್: 'ನ್ಯಾಯಾಂಗ ನಿಂದಕರಿಗೆ ಸುಮೋಟೊ ಹಾಕಿ'
Kshetra Samachara
21/03/2022 06:05 pm