ಬೆಂಗಳೂರು: ರಾಜ್ಯದಲ್ಲಿ ಉದ್ರಿಕ್ತ ವಾತಾವರಣ ಸೃಷ್ಟಿಸಿದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಹೈ ಕೋರ್ಟ್ ನಲ್ಲಿ ಅರ್ಜಿವೊಂದರ ವಿವಾರಣೆ ಆರಂಭವಾದ ಕೆಲವು ಹೊತ್ತಿನಲ್ಲಿ ನ್ಯಾಯಾಧೀಶರ ವರ್ಗಾವಣೆಯಾಗಿರುವ ಕಾರಣ ವಿವಾದದ ಅಂತಿಮ ನಿಲುವು ಬಹಿರಂಗವಾಗಿಲ್ಲ.
ರಾಜ್ಯದಲ್ಲಿ ಹಿಜಾಬ್ ಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದ ವಕೀಲ ಸಿರಾಜುದ್ದೀನ್ ಅಹ್ಮದ್, ಶತಭೀಶ್ ಶಿವಣ್ಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ವಿಸ್ತೃತ ಪೀಠದಲ್ಲಿ ವಿಚಾರಣೆ ಆಗಲು ನ್ಯಾಯಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.ಮಧ್ಯಂತರ ಆದೇಶ ಚರ್ಚೆ ಆ ಪೀಠದಲ್ಲಿ ನಡೆಯಲಿದೆ. ಹಿಜಬ್ ಮುಸ್ಲಿಂರ ಮೂಲಭೂತ ಹಕ್ಕು. ಇಸ್ಲಾಮಿಕ್ ಪ್ರಕಾರ ಒಂದು ಹೆಣ್ಣು ಮುಖ,ಕೈ ಮಾತ್ರ ತೋರಿಸಬೇಕು ಎಂದಿದೆ.
ಸರ್ಕಾರ ಚುನಾವಣೆಗಾಗಿ ಈ ರೀತಿ ಸೃಷ್ಠಿ ಮಾಡುತ್ತಿದೆ.ಶಬರಿಮಲೆ ಟೈಮಲ್ಲಿ ಮಾಲೆ ಹಾಕಿ ಬರ್ತಾರೆ. ಕ್ರಿಸ್ಚಿಯನ್ ಸ್ಕಾಫ್ ಆಗ್ತಾರೆ.ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ರವರು ಅವರು ತಲೆ ಮೇಲೆ ಹಾಕ್ತಾರೆ ಅಂತ ಸಿರಾಜುದ್ದೀನ್ ಹೇಳಿದ್ರೆ.
ಹಿಜಾಬ್ ವಿಚಾರವಾಗಿ ಇಂದು ಕೂಡ ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿದ್ದು,ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಬೇಕು ಅಂತಾ ಆದೇಶ ನೀಡಿದ್ದಾರೆ.
ಇದು ಬರಿ ಹಿಜಾಬ್ ವಿಚಾರ ಅಲ್ಲ, ಮುಸ್ಲಿಂ ಲಾ, ಹಿಂದೂ ಲಾ ವನ್ನು ಕೂಡ ಪರಿಶೀಲನೆ ಮಾಡಬೇಕಿದೆ. ಇದು ಗಂಭೀರ ವಿಚಾರ ಆಗಿರೋದ್ರಿಂದ ಸಿಜೆ ಗೆ ಸಲ್ಲಿಕೆಗೆ ಸೂಚಿಸಲಾಗಿದೆ ಎಂದು ಶತಭೀಶ್ ಶಿವಣ್ಣ ಅಭಿಪ್ರಾಯ ಪಟ್ಟಿದ್ದಾರೆ.
PublicNext
09/02/2022 05:50 pm