ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆಲಸ ಬಹಿಷ್ಕರಿಸಿದ ಸ್ವಿಗ್ಗಿ ಡೆಲಿವರಿ ಬಾಯ್ಸ್; ಕಾರಣವೇನು ಗೊತ್ತಾ?

ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಸ್ವಿಗ್ಗಿ ಡೆಲಿವರಿ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಡಿಕೆ ಈಡೇರುವವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದಾರೆ. ಬೆಂಗಳೂರಿನ ಹಲವೆಡೆ ಹೊಟೆಲ್​ಗಳ ಮುಂಭಾಗದಲ್ಲಿ ಬೆಳಗ್ಗೆಯಿಂದಲೇ ಸ್ವಿಗ್ಗಿ ಡೆಲಿವರಿ ಬಾಯ್​ಗಳು ಪ್ರತಿಭಟನೆ ನಡೆಸುತ್ತಿದ್ದಾರೆ‌.

ಮೊದಲು ಪ್ರತಿ ಆರ್ಡರ್​ಗೆ 8 ರೂಪಾಯಿ ಕೊಡುತ್ತಿದ್ದರು. ಆದರೆ ಈಗ 4 ರೂಪಾಯಿಗೆ ಇಳಿಸಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಬಸವೇಶ್ವರ ನಗರ, ಮಲ್ಲೇಶ್ವರಂ, ಯಲಹಂಕ ಸೇರಿದಂತೆ ನಗರದ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಲೇಟ್ ನೈಟ್ ಡೆಲಿವರಿ ಕೊಡುವ ಸಂದರ್ಭದಲ್ಲಿ ಸುರಕ್ಷೆಗೆ ಗಮನ ನೀಡಬೇಕು. ಗ್ರಾಹಕರು ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಾಗಲೂ ನಮ್ಮನ್ನೇ ಹೊಣೆಯಾಗಿಸಿ ದಂಡ ವಿಧಿಸುವ ಕ್ರಮ ನಿಲ್ಲಬೇಕು ಎಂದು ಒತ್ತಾಯಿಸಿದರು.

ನಾವು ಮಾಡಿದ ಕೆಲಸಕ್ಕೆ ಡೆಲಿವರಿ ಚಾರ್ಜಸ್ ಸರಿಯಾಗಿ ಕೊಡುತ್ತಿಲ್ಲ. ಇದು ತಪ್ಪಬೇಕಿದೆ. ಅರ್ಡರ್ ಮತ್ತು ರಿಟರ್ನ್ ಅರ್ಡರ್​ಗಳು ಸಮರ್ಪಕವಾಗಿ ಅಪ್​ಡೇಟ್ ಆಗಬೇಕು. ಆ್ಯಪ್​ನಲ್ಲಿ ರೈನ್ ಚಾರ್ಜ್ ತೋರಿಸಿದರೂ ನಮಗೆ ಹಣ ಸಿಗುತ್ತಿಲ್ಲ. ತಡರಾತ್ರಿಯಲ್ಲಿ 30 ರೂಪಾಯಿ ಶುಲ್ಕ ಕೊಡುತ್ತಿದ್ದರು. ಈಗ ಅದನ್ನೂ ಕೊಡುತ್ತಿಲ್ಲ. ಇತ್ತೀಚೆಗೆ ನಿಲ್ಲಿಸಿರುವ ತಿಂಗಳ ಇನ್ಸೆಂಟೀವ್ ಅನ್ನು ಮತ್ತೆ ಆರಂಭಿಸಬೇಕು ಎಂದು ಆಗ್ರಹಿಸಿದರು.

Edited By :
PublicNext

PublicNext

23/07/2022 05:09 pm

Cinque Terre

41.2 K

Cinque Terre

1

ಸಂಬಂಧಿತ ಸುದ್ದಿ