ಬೆಂಗಳೂರಿನಲ್ಲಿ ಮಳೆ ನೀರಿನ ಕಾಟ ಒಂದು ಕಡೆಯಾದ್ರೆ, ಮಳೆಯಿಂದ ನೀರು ಕೊರೆದು ರಸ್ತೆಗಳಲ್ಲಿರುವ ಗುಂಡಿಗಳ ಹಾವಳಿನೇ ಜಾಸ್ತಿ ಆಗಿದೆ. ಪ್ರತಿನಿತ್ಯವೂ ರಸ್ತೆಯಲ್ಲಿ ಓಡಾಡಬೇಕಾದ್ರೆ, ನರಕ ಅನುಭವಿಸುತ್ತಿದ್ದಾರೆ ವಾಹನ ಸವಾರರು. ಈ ಹಿನ್ನಲೆ ಕೆಂಗೇರಿ ಸಮೀಪದಲ್ಲಿರುವ ಉಲ್ಲಾಳ್ ವಾರ್ಡ್‌ನಲ್ಲೂ ಸಹ ಟಾರ್ ಕಿತ್ತು ಜಲ್ಲಿ ಕಲ್ಲುಗಳು ಆಚೆ ಬರ್ತಿದೆ. ಪ್ರತಿನಿತ್ಯ ಅಪಘಾತ ಸಂಭವಿಸುತ್ತಿದ್ದು, ವಾಹನಸವಾರರು ಸಾವಿಗೀಡಾಗುತ್ತಿದ್ದಾರೆ.
ನಗರದಲ್ಲಿ ಸುರಿಯುತ್ತಿರುವ ಮಳೆಗೆ ರಸ್ತೆಗಳೆಲ್ಲವೂ ಗುಂಡಿಗಳಾಗಿ ಮಾರ್ಪಡಾಗಿವೆ. ಅಲ್ಲದೇ ಉಲ್ಲಾಳ್ ಉಪನಗರದ ರಸ್ತೆಗಳ್ಳೆಲ್ಲವೂ ಕಿತ್ತು ಕೆರೆ ಹಿಡಿದಿದೆ. ದಿನಕೊಬ್ಬರು ಗುಂಡಿಗಳಿಗೆ ಬಿದ್ದು ಗಾಯಗೊಳ್ಳುತ್ತಿದ್ದಾರೆ.. ಈ ಹಿನ್ನಲೆ ಕಳೆದ ತಿಂಗಳಲ್ಲಿ ಈ ರಸ್ತೆಯಲ್ಲಿ ಗುಂಡಿಗಳಿಂದ ಬಿದ್ದು ಸಾವಿಗೀಡಾಗಿರುವ ದೃಷ್ಯಗಳು. ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ರಸ್ತೆಯಲ್ಲಿ ವಾಹನ ಚಲಾಹಿಸಬೇಕು ಅಂದ್ರೆ ಜೀವ ಕೈನಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಕ್ರಿಯೇಟ್ ಆಗ್ತಿದೆ. ಅಧಿಕಾರಿಗಳು ಎಚ್ಚೆತ್ತು ಕೂಡಲೇ ಈ ಬಗ್ಗೆ ಇದಕ್ಕೆ ಕ್ರಮ ಜರುಗಬೇಕಿದೆ.
ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..
PublicNext
05/09/2022 08:52 pm