ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಬಡವರು ಅಪಾರ್ಟ್ ಮೆಂಟ್ ನಲ್ಲಿ ಮನೆ ಖರೀದಿಸಿದರೆ 5 ಲಕ್ಷ ಪರಿಹಾರ

ಬೆಂಗಳೂರು: ಸರ್ಕಾರಿ ಸ್ವೌಮ್ಯದ ಇಲಾಖೆಗಳ ನಿರ್ಮಿಸಿರುವ ಅಪಾರ್ಟ್ಮೆಂಟ್ ಮನೆ ಖರೀದಿಸುವ ಬಡವರಿಗೆ ಪಾಲಿಕೆ ಆಫರ್ ನೀಡಿದೆ.

ನಗರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಒಂಟಿ ಮನೆ ಯೋಜನೆಯಡಿ ಮನೆ ನಿರ್ಮಾಣಕ್ಕೆ ನೀಡಲಾಗುವ 5 ಲಕ್ಷ ರೂ. ಧನ ಸಹಾಯವನ್ನು ಸರ್ಕಾರ ಇತರೆ ಇಲಾಖೆ ಅಥವಾ ಪ್ರಾಧಿಕಾರದಿಂದ ನಿರ್ಮಿಸಲಾದ ಅಪಾರ್ಟ್ ಮೆಂಟ್ ಖರೀದಿಗೂ ವಿಸ್ತರಣೆ ಮಾಡುವುದಕ್ಕೆ ಕಲ್ಯಾಣ ವಿಭಾಗದಿಂದ ಮುಖ್ಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ನಗರದಲ್ಲಿ 20*30 ಅಥವಾ ಕಡಿಮೆ ಅಳತೆಯ ಸ್ವಂತ ನಿವೇಶನ ಹೊಂದಿದ ಆರ್ಥಿಕ ಹಿಂದುಳಿದ ವರ್ಗಗಳ ಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಅನುಕೂಲ ಆಗುವಂತೆ ತಲಾ 5 ಲಕ್ಷ ರೂ. ನೆರವು ನೀಡಲು ಒಂಟಿ ಮನೆ ಯೋಜನೆ ರೂಪಿಸಲಾಗಿದೆ.

ಈ ಯೋಜನೆಯಡಿ ನಿವೇಶನ ಇದ್ದವರಿಗೆ ಮನೆ ನಿರ್ಮಾಣಕ್ಕೆ ಮಾತ್ರ ಅವಕಾಶ ಮಾಡಿಕೊಡುವುದರಿಂದ ನೈಜವಾಗಿ ನಿವೇಶನ ಖರೀದಿಗೂ ಅರ್ಹತೆ ಇಲ್ಲದ ಬಡಜನರು ಸ್ವಂತ ಮನೆ ಹೊಂದುವ ಅವಕಾಶಗಳಿಂದ ವಂಚಿತ ಆಗುತ್ತಿದ್ದಾರೆ. ಹೀಗಾಗಿ, ಈ ಒಂಟಿಮನೆ ಯೋಜನೆಯಡಿ ನೀಡುವ ಅನುದಾನವನ್ನು ಸರ್ಕಾರದ ವಿವಿಧ ಯೋಜನೆಗಳಡಿ ಬಡಜನರಿಗೆ ಸೂರು ಒದಗಿಸಲು ನಿರ್ಮಿಸಲಾದ ಮನೆಗಳ ಖರೀದಿಗೆ ನೀಡುವುದಕ್ಕೆ ಬಿಬಿಎಂಪಿ ಕಲ್ಯಾಣ ವಿಭಾಗದಿಂದ ತೀರ್ಮಾನಿಸಲಾಗಿದೆ. ಈ ಬಗ್ಗೆ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿ ಒಪ್ಪಿಗೆಗೆ ಕಳುಹಿಸಲಾಗಿದೆ.

ಅನುದಾನದಲ್ಲಿ ಹೊಸದಾಗಿ ಸರ್ಕಾರಿ ಪ್ರಾಧಿಕಾರಗಳಿಂದ ನಿರ್ಮಿಸಲಾಗುತ್ತಿರುವ ಅಪಾರ್ಟ್ಮೆಂಟ್ ಗಳಲ್ಲಿನ ಮನೆ ಖರೀದಿಗೆ ಅನುಕೂಲ ಆಗುವಂತೆ ತಲಾ 5 ಕೋಟಿ ರೂ. ನೀಡಲು 20 ಕೋಟಿ ರೂ. ಮೀಸಲಿಡಲು ಮುಂದಾಗಿದೆ. ಈ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಒಟ್ಟು 400 ಮಂದಿಗೆ ಇದರ ಅನುಕೂಲ ಸಿಗಲಿದೆ ಎಂದು ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

04/09/2022 01:34 pm

Cinque Terre

3.69 K

Cinque Terre

0

ಸಂಬಂಧಿತ ಸುದ್ದಿ