ಬೆಂಗಳೂರು : ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಯ ನಗರದ ಅತ್ಯಂತ ಉದ್ದದ ಸುರಂಗ ಮಾರ್ಗವಾದ ಗೊಟ್ಟಿಗೆರೆ- ನಾಗ ವಾರ ನಡುವಿನ ಕಾಮಗಾರಿಯಲ್ಲಿ ಇಂದು ನಮ್ಮಮೆಟ್ರೋ ಪ್ರಾಧಿಕಾರ ಮಹತ್ವದ ಮೈಲುಗಲ್ಲು ಸಾಧಿಸಿದೆ.
ಹೌದು....ವಿಂದ್ಯಾ ಟಿಬಿಎಂ ಯಂತ್ರ ಸುರಂಗ ಕೊರೆದು ಯಶಸ್ವಿಯಾಗಿ ಹೊರಬಂದಿದೆ. 900 ಮೀಟರ್ ಸುರಂಗ ಕೊರೆದು ಪಾಟರಿ ಟೌನ್ ಮೆಟ್ರೋ ನಿಲ್ದಾಣದಲ್ಲಿ ಇಂದು ಬೆಳಗ್ಗೆ 10.30 ಯಶಸ್ವಿಯಾಗಿ ಹೊರಬಂದಿದೆ.
ಈ ವರ್ಷದ ಫೆಬ್ರವರಿ 15 ರಂದು ಕಂಟೋನ್ಮೆಂಟ್ ಬಳಿಯಿಂದ ಸುರಂಗ ಕೊರೆಯುವ ಕಾರ್ಯವನ್ನು ಟಿಬಿಎಂ ವಿಂದ್ಯಾ ಪ್ರಾರಂಭ ಮಾಡಿತ್ತು. ಸರಿ ಸುಮಾರು 184 ದಿನಗಳನ್ನು ತೆಗೆದುಕೊಂಡು ಇಂದು ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕೆ ಬಂದು ತಲುಪಿತು.ಈ ಹಿಂದೆ ಕಂಟೋ ನ್ಮೆಂಟ್ನಿಂದ ಶಿವಾಜಿನಗರದವರೆಗೆ 855 ಮೀಟರ್ ಸುರಂಗ ಕೊರೆದು ವಿಂದ್ಯಾ ಯಂತ್ರ ಹೊರಬಂದಿತ್ತು.
ಇನ್ನೂ ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆ ಆದ ಗೊಟ್ಟಗೆರೆ- ನಾಗವಾರ 21.25ಕಿ.ಮೀ ಒಟ್ಟು ಉದ್ದ ಇದೆ.
13.79ಕಿ.ಮೀ. ಡೇರಿ ವೃತ್ತ- ನಾಗವಾರ ಸುರಂಗ ಮಾರ್ಗದ ಉದ್ದ, 11,500 ಕೋಟಿ ರೂ. ಮಾರ್ಗದ ಅಂದಾಜು ಯೋಜನಾ ವೆಚ್ಚ ಹಾಕಿಕೊಳ್ಳಲಾಗಿದೆ. ಸುರಂಗದಲ್ಲಿ ಬರುವ 12 ನಿಲ್ದಾಣಗಳು 06 ಎತ್ತರಿಸಿದ ನಿಲ್ದಾಣಗಳು ಬರಲಿದೆ.
ಇನ್ನೂ ಕಂಟೋನ್ಮೆಂಟ್ನಿಂದ ಪಾಟರಿ ಟೌನ್ವರೆಗೆ 2.884 ಕಿ.ಮೀ. ಉದ್ದ ಸುರಂಗ ಮಾರ್ಗದಲ್ಲಿ ಉರ್ಜಾ ಮತ್ತು ವಿಂದ್ಯಾ ಎಂಬ ಟಿಬಿಎಂಗಳು ಕಾರ್ಯ ನಿರ್ವಹಿಸುತ್ತಿವೆ.
ಊರ್ಜಾ ಒಟ್ಟು 864 ಮೀಟರ್ ಮತ್ತು ವಿಂದ್ಯ 856 ಹಾಗೂ 900 ಮೀಟರ್ ಗಳಷ್ಟು ಸುರಂಗ ತೋಡಿವೆ. ಡೇರಿ ವೃತ್ತದಿಂದ ನಾಗವಾರವರೆಗಿನ ಸುರಂಗ ಮಾರ್ಗವನ್ನು 9 ಟಿಬಿಎಂಗಳು ಕೊರೆಯುತ್ತಿದೆ.
PublicNext
18/08/2022 06:06 pm