ಬೆಂಗಳೂರು: ಸರ್ಕಾರದ ವಾರ್ಡ್ ವಿಂಗಡನೆ ವಿರುದ್ಧ ಹೈಕೋರ್ಟ್ ನಲ್ಲಿ ಕೇಸು ದಾಖಲಿಸಿರುವ ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ನಾಗರಾಜುರವರು ಮಾಧ್ಯಮಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಬಿಬಿಎಂಪಿ ಚುನಾವಣೆ ವಿಳಂಬವಾಗಲು ಬಿಜೆಪಿ ಸರ್ಕಾರವೇ ಹೊಣೆ. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಹೆಚ್ಚಿದ್ರೂ ವಾರ್ಡ್ ಸಂಖ್ಯೆ ಕಡಿಮೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಆಯುಕ್ತರು, ಜಿಲ್ಲಾಧಿಕಾರಿಗಳು, ವಾರ್ಡ್ ವಿಂಗಡನೆ ಮಾಡಬೇಕು. ಆದರೆ ಬಿಜೆಪಿ ಶಾಸಕರ ಆದೇಶದ ಮೇರೆಗೆ ವಾರ್ಡ್ ವಿಂಗಡನೆ ಮಾಡಿದ್ದಾರೆ. ನ್ಯಾಯಯುತವಲ್ಲದ, ಜನ ವಿರೋಧಿ, ಮಾನದಂಡವಿಲ್ಲದ, ಬಿಜೆಪಿ ಶಾಸಕರ ಹಿತಾಸಕ್ತಿಗೆ ಅನುಗುಣವಾಗಿ ವಾರ್ಡ್ ವಿಂಗಡಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
PublicNext
17/08/2022 08:45 pm