ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡಿಜಿಯಾತ್ರೆ ಆರಂಭ; ಏನಿದರ ವಿಶೇಷತೆ?

ದೇವನಹಳ್ಳಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ( KIA)ದಲ್ಲಿ ಮುಖಚಹರೆ ಮೂಲಕ ವಿಮಾನ ನಿಲ್ದಾಣ ಪ್ರವೇಶಿಸುವ ಯೋಜನೆಯೇ ಡಿಜಿಯಾತ್ರಾ. ಈ ಆ್ಯಪ್ ಬೀಟಾ ಆವೃತ್ತಿ ಸೇವೆ ಸೋಮಾವಾರದಿಂದ KIAನಲ್ಲಿ ಪ್ರಾರಂಭವಾಗಿದೆ.

ಬೆಂಗಳೂರು ವಿಮಾನ ನಿಲ್ದಾಣ ಇ-ಗೇಟ್‌ನಲ್ಲಿ ಡಿಜಿಯಾತ್ರಾ ಬಯೋಮೆಟ್ರಿಕ್ ಬೋರ್ಡಿಂಗ್ ಸಿಸ್ಟಮ್‌ ಅಳವಡಿಸಲಾಗಿದ್ದು, ಮುಂದೆ ಹಂತ ಹಂತವಾಗಿ ಎಲ್ಲಾ ಗೇಟ್‌ಗಳಿಗೂ ಅಳವಡಿಸಲಾಗುವುದು ಎಂದು KIAL ತಿಳಿಸಿದೆ.

ಸದ್ಯ ಡಿಜಿಯಾತ್ರಾ ಯೋಜನೆಯನ್ನು ವಿಸ್ತಾರ ಏರ್‌ಲೈನ್ಸ್ ಮತ್ತು ಏರ್ ಏಷ್ಯಾ ವಿಮಾನ ಸಂಸ್ಥೆಗಳು ಅಳವಡಿಸಿಕೊಂಡಿವೆ. ಆ್ಯಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಪ್ಲೇಸ್ಟೋರ್‌ನಿಂದ ಮೊದಲೇ ಆ್ಯಪ್ ಡೌನ್ಲೋಡ್ ಮಾಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ತಿಂಗಳೊಳಗೆ ಐಪೋನ್ ಐಒಎಸ್‌ನಲ್ಲಿ ಈ ಆ್ಯಪ್ ಲಭ್ಯವಿರಲದೆ ಎಂದು ಬಿಐಎಎಲ್‌ಸಿಇಒ ಹರಿ ಮಾರಾರ್ ಸ್ಪಷ್ಟಪಡಿಸಿದ್ದಾರೆ.

ಅಂತು ಅಂತರರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಐಟೆಕ್ ಸೌಲಭ್ಯ ಸಿಗುತ್ತಿರುವುದು ಶುಭಸೂಚಕ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ

Edited By : Vijay Kumar
PublicNext

PublicNext

17/08/2022 10:38 am

Cinque Terre

17.13 K

Cinque Terre

0

ಸಂಬಂಧಿತ ಸುದ್ದಿ