ಬೆಂಗಳೂರು : ಸಿಲಿಕಾನ್ ಸಿಟಿ ಮಂದಿ ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ಆದರೆ ಇದೇ ಬೆಂಗಳೂರಿನ ಮೈಸೂರ್ ರಸ್ತೆಯಲ್ಲಿ ಟ್ರಾಫಿಕ್ ಆಗೋದು ಸ್ವಲ್ಪ ಕಮ್ಮಿ. ಆದ್ರೆ ಇಂದು ಈ ರಸ್ತೆಯಲ್ಲಿಯೂ ಸಹ ಟ್ರಾಫಿಕ್ ಜಾಮ್ ಆಗಿದ್ದು ಜನ ಹೈರಾಣಾಗಿದ್ದಾರೆ.
ನಗರದ ಕೆಂಗೇರಿಯಿಂದ ಬಿ.ಎಚ್.ಇ.ಎಲ್ ವರೆಗೂ ಟ್ರಾಫಿಕ್ ಜಾಮ್ ಆಗಿದ್ದು ಬೆಳಿಗ್ಗೆ ಇಂದ ಸಂಜೆವರೆಗೂ ಜನ ಟ್ರಾಫಿಕ್ ಕಿರಿಕಿರಿಗೆ ಬೇಸತ್ತಿದ್ದಾರೆ.
ಇನ್ನು ಟ್ರಾಫಿಕ್ ಮಧ್ಯೆ ರಸ್ತೆಯಲ್ಲಿರುವ ಗುಂಡಿಗಳಿಗೆ ಜಲ್ಲಿಕಲ್ಲು ಸುರಿಯುವ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಎಲ್ಲಾ ರಸ್ತೆಗಳಿಗೂ ಬ್ಯಾರಿಗೇಟ್ ಹಾಕಿರುವುದರಿಂದ ಈ ಟ್ರಾಫಿಕ್ ಹೆಚ್ಚಾಗಿದೆ.
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಅದ್ಯಾವಾಗ ನೆಮ್ಮದಿಯಿಂದ ರಸ್ತೆಯಲ್ಲಿ ಓಡಾಡುವ ದಿನ ಬರುತ್ತೋ ದೇವರೇ ಬಲ್ಲ..
Kshetra Samachara
10/08/2022 10:02 pm