ಬೆಂಗಳೂರು: ರಾಜ್ಯದ ಹಲವೆಡೆ ನಿರಂತರ ಮಳೆ ಸುರಿಯುತ್ತಿದೆ. ರಾಜಧಾನಿಯಲ್ಲಿ ಮಳೆ ಅಬ್ಬರ ಕಡಿಮೆ ಇದ್ರೂ ಅಲ್ಲಲ್ಲಿ ಮಳೆ ಎಫೆಕ್ಟ್ ಮಾತ್ರ ಆಗ್ತಿದೆ.
ಮೂರು ದಿನಗಳಿಂದ ಸುರಿದ ಮಳೆಗೆ ಚಿಕ್ಕಪೇಟೆಯಲ್ಲಿ ಮೂರಂತಸ್ತಿನ ಕಟ್ಟಡ ಕುಸಿದಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಳಗಿನ ಜಾವ ಮೂರು ಗಂಟೆಗೆ ಕಟ್ಟಡ ಕುಸಿದಿದೆ. ಪರಿಣಾಮ ಕೆಳ ಮಹಡಿಯಲ್ಲಿದ್ದ ಮೂರು ಬಟ್ಟೆ ಅಂಗಡಿಗಳು ನೆಲಸಮಗೊಂಡಿವೆ. 100 ವರ್ಷಕ್ಕೂ ಹಳೆಯ ಕಟ್ಟಡವಾದ್ದರಿಂದ ಮೇಲ್ಭಾಗದಲ್ಲಿ ಯಾರೂ ವಾಸವಾಗಿರಲಿಲ್ಲ. ಸದ್ಯ ಜೆಸಿಬಿ ಮೂಲಕ ತೆರವು ಕಾರ್ಯ ನಡೆಯುತ್ತಿದೆ.
PublicNext
06/08/2022 03:06 pm