ಬೆಂಗಳೂರು: ಧೂಳು.. ಧೂಳು... ದೂಳು.. ಈ ರಸ್ತೆ ಮೇಲೆ ದಿನನಿತ್ಯ ಸಂಚಾರ ಮಾಡುವ ಚಾಲಕರು, ಸವಾರರು ಧೂಳಿನಿಂದ ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇನ್ನು ಇಲ್ಲಿನ ಜನರ ಸ್ಥಿತಿ ಅಂತೂ ಹೇಳತಿದ್ದು. ಇದಕ್ಕೆಲ್ಲಾ ಕಾರಣ ಬಿಡಬ್ಲ್ಯೂಎಸ್ಎಸ್‌ಬಿ ಮಾಡುತ್ತಿರುವ ಕಾಮಗಾರಿ. ಬಿಡಬ್ಲ್ಯೂಎಸ್ಎಸ್ಬಿ ಕಾಮಗಾರಿಗಾಗಿ ಅಗೆದ ಮಣ್ಣನ್ನು ರಸ್ತೆಯ ಪಕ್ಕದಲ್ಲೇ ಹಾಕಿರುವ ಕಾರಣ ಧೂಳು ಹೆಚ್ಚಾಗುತ್ತಿದೆ.
ಇದು ಗೊಟ್ಟಿಗೆರೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋಗುವಂತಹ ರಸ್ತೆ. ಬಿಡಬ್ಲ್ಯೂಎಸ್ಎಸ್ಬಿ ರಸ್ತೆ ಅಗೆದಿರುವ ಸ್ಥಳದಲ್ಲಿ ಬರೀ ಬ್ಯಾರಿಕೇಡ್ ಹಾಕಿ ಬಿಟ್ಟಿದ್ದಾರೆ. ಈ ರಸ್ತೆ ಮೇಲೆ ಯಾವುದೇ ಸ್ಟ್ರೀಟ್ ಲೈಟ್ ಇಲ್ಲದ ಕಾರಣ ಅಗೆದಿರುವ ಗುಂಡಿ ಕಾಣುವುದೇ ಇಲ್ಲ. ಇದರಿಂದ ರಾತ್ರಿ ಬರುವ ವಾಹನ ಸವಾರರಿಗೆ ಗುಂಡಿ ಕಾಣದೆ ಗುಂಡಿಯೊಳಗೆ ಬೀಳಬಹುದು. ಆದಷ್ಟು ಬೇಗ ಬಿಡಬ್ಲ್ಯೂಎಸ್ಎಸ್ಬಿ ಎಚ್ಚೆತ್ತುಕೊಂಡು ಕಾಮಗಾರಿ ಸ್ಥಳದಲ್ಲಿ ರಿಫ್ಲೆಕ್ಟರ್ ಗಳನ್ನು ಹಾಕಿ ಅಮಾಯಕ ಜೀವಗಳನ್ನು ಉಳಿಸಬೇಕಿದೆ ಮತ್ತು ಕಾಮಗಾರಿ ಶೀಘ್ರ ಮುಗಿಸಿ ಧೂಳಿನಿಂದ ಮುಕ್ತಿ ನೀಡಬೇಕು ಎನ್ನುವುದು ಪಬ್ಲಿಕ್ ಆಗ್ರಹವಾಗಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
29/07/2022 08:26 am