ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅರಣ್ಯ ಆವೃತ ರಸ್ತೆಯ 4 ಕಿ.ಮೀ. ಬೀದಿದೀಪವಿಲ್ಲ... ಕಗ್ಗತ್ತಲ ಯಾನವೇ ಎಲ್ಲ!

ಬೆಂಗಳೂರು: ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ರಾಮೂಹಳ್ಳಿ ಪಂಚಾಯಿತಿ ಭಾಗದ ಭೀಮನ ಕುಪ್ಪೆ ಹತ್ತಿರ 3-4 ಕಿ.ಮೀ. ಹೋದ್ರೆ ಎಲ್ಲೂ ಸಹ ಒಂದೇ ಒಂದು ಸ್ಟ್ರೀಟ್ ಲೈಟ್‌ ಇಲ್ಲ!

ಕಳ್ಳತನ ಮಾಡೋರಿಗೆ ಒಳ್ಳೆಯ ಏರಿಯಾವಿದು. ಈ ಜಾಗದಲ್ಲಿ ಜನ ಓಡಾಡಲು ಬಲು ತ್ರಾಸ ಪಡಬೇಕಾಗಿದೆ. ವೀಡಿಯೊದಲ್ಲಿ ಕಾಣ್ತಿರುವ ಈ ಜಾಗ ಪೂರ್ತಿ ಕಾಡು ಆವೃತ. ಆದ್ರೂ ಸಹ ಅಧಿಕಾರಿಗಳು ಒಂದು ಲೈಟ್ ಹಾಕಿಲ್ಲ. ರಸ್ತೆ ಮಧ್ಯೆ ಅಚಾನಕ್ ಗಾಡಿ ಕೆಟ್ರೆ ಆ ವಾಹನ ಸವಾರರ ಪಾಡು ದೇವರಿಗೇ ಪ್ರೀತಿ.

ರಾತ್ರಿ 7- 8 ಗಂಟೆ ನಂತರ ಈ ಜಾಗದಲ್ಲಿ ಯಾರೂ ಸಂಚರಿಸುವುದಿಲ್ಲ. ರಾತ್ರಿ ನಂತರ ರಾಮೂಹಳ್ಳಿಗೆ ಹೋಗಬೇಕಂದ್ರೆ ಮೈಸೂರು ರಸ್ತೆ ಮೂಲಕವೇ ಸಾಗಬೇಕು. ಇದೆಲ್ಲವೂ ಅಧಿಕಾರಿಗಳ ಕಣ್ಣಿಗೆ ಯಾಕೆ ಕಾಣ್ತಿಲ್ಲ ಅನ್ನೋದೇ ಅಚ್ಚರಿ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ರಿಪೋರ್ಟರ್ ಅವರಿಂದ ಪೂರ್ಣ ಮಾಹಿತಿಯ ವಾಕ್ ಥ್ರೂ...

ವರದಿ: ರಂಜಿತಾ ಸುನಿಲ್ ಪಬ್ಲಿಕ್‌ ನೆಕ್ಸ್ಟ್‌ ಬೆಂಗಳೂರು

Edited By : Nagesh Gaonkar
PublicNext

PublicNext

26/07/2022 10:24 am

Cinque Terre

27.39 K

Cinque Terre

0

ಸಂಬಂಧಿತ ಸುದ್ದಿ