ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಂಪೇಗೌಡ ಏರ್ ಪೋರ್ಟ್ ಗೆ ಸಿಟಿಲಿ ಪೀಕೇ ಸಮೂಹದ 3D ಅತ್ಯಾಧುನಿಕ ಮುದ್ರಣ ಸೌಲಭ್ಯ

ಬೆಂಗಳೂರು : ಅತ್ಯಾಧುನಿಕ 3ಡಿ ಮುದ್ರಣ ಸೌಲಭ್ಯ ಈಗ ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದ ಏರ್ ಪೋರ್ಟ್ ಸಿಟಿಲಿ ಕಾರ್ಯ ನಿರ್ವಹಿಸುತ್ತಿದೆ. ಪೀಕೇ ಗ್ರೂಪ್ ಬೆಂಗಳೂರು ಏರ್ಪೋರ್ಟ್ ಸಿಟಿ ಸಹಯೋಗದಲ್ಲಿ ಈ ವಿನೂತನ ಬಗೆಯ ಸೌಲಭ್ಯವನ್ನು ಉದ್ಘಾಟಿಸಿದೆ. ಇದು ಎಂಜಿನಿಯರಿಂಗ್, ಡಿಸೈನ್ & ಸಹಯೋಗಕ್ಕೆ ಆದ್ಯತೆ ನೀಡುತ್ತಿದೆ.

“ನಮ್ಮ ಏರ್ ಪೋರ್ಟ್ ಸಿಟಿಲಿ ಈ ಅತ್ಯಾಧುನಿಕ 3ಡಿ ಪ್ರಿಂಟಿಂಗ್ ಸೌಲಭ್ಯವು & ಪೀಕೇ ಗ್ರೂಪ್ ಸಹಯೋಗದಲ್ಲಿ ಉದ್ಘಾಟಿಸಲು ಉತ್ಸುಕರಾಗಿದ್ದೇವೆ.

ಈ ಸೌಲಭ್ಯ ನಮ್ಮ ಏರ್ ಪೋರ್ಟ್ ಸಿಟಿಯನ್ನ ತಾಂತ್ರಿಕ ಕೇಂದ್ರವಾಗಿ ಪರಿವರ್ತಿಸಲು ನೆರವಾಗಲಿದೆ. ಆರೋಗ್ಯಸೇವೆಯಿಂದ ನಿರ್ಮಾಣ & ವೈಮಾನಿಕ ಕ್ಷೇತ್ರದವರೆಗೆ 3ಡಿ ಪ್ರಿಂಟಿಂಗ್ ಸೃಜನಶೀಲತೆ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಎಲ್ಲ ಕೈಗಾರಿಕೆಗಳಲ್ಲಿ ಆವಿಷ್ಕಾರ ಹೆಚ್ಚಿಸಲಾದೆ. ಈ ತಂತ್ರಜ್ಞಾನ ಬೆಂಗಳೂರನ್ನು ಜ್ಞಾನಾಧಾರಿತ ಅರ್ಥವ್ಯವಸ್ಥೆ ಕಾರ್ಯತಂತ್ರೀಯ ಸ್ಥಾನ & ಭಾರತದ ಸಿಲಿಕಾನ್ ವ್ಯಾಲಿಯಾಗಿ ಮತ್ತಷ್ಟು ಕ್ರೋಢೀಕರಿಸಲು ನೆರವಾಗುತ್ತದೆ.

ನಮ್ಮ ವಿಸ್ತಾರ ಅನುಭವ ಮತ್ತು ಗುಣಮಟ್ಟ, ಪೂರೈಕೆ ಹಾಗೂ ವೆಚ್ಚದ ಮೇಲಿನ ಗಮನದ ಮೂಲಕ ನಾವು ಕಳೆದ ಕೆಲ ದಶಕಗಳಿಂದ ನಿರ್ಮಿಸಿದ್ದು ಪೀಕೇ ಕೌಶಲ್ಯಾಭಿವೃದ್ಧಿ, ವಿನ್ಯಾಸ ಆಧರಿತ ಆಲೋಚನೆ ಮತ್ತು ಗ್ರಾಹಕರ ಅನುಕೂಲಕ್ಕೆ ಉತ್ಪನ್ನಗಳ ಗರಿಷ್ಠ ಗೊಳಿಸುವಿಕೆಗೆ ಅಪಾರ ಕೊಡುಗೆ ನೀಡಬಲ್ಲದು. ಅಲ್ಲದೆ ನಾವು ವಿವಿಧ ತರಬೇತಿ ಕಾರ್ಯಕ್ರಮ ನೀಡಲು ಮತ್ತು ಇಂದಿನ ಯುವಜನರಲ್ಲಿ ಉತ್ಸಾಹ ಮತ್ತು ಸೃಜನಶೀಲತೆಯನ್ನು ಹುಟ್ಟುಹಾಕಲು ವಿನ್ಯಾಸ ಆಧರಿತ ತಾರ್ಕಿಕತೆಯನ್ನು ಎಲ್ಲ ಉತ್ಪಾದನೆ ಪ್ರಕ್ರಿಯೆಗಳಲ್ಲಿ ಬಳಸಲು ವಿಶ್ವದ ಖ್ಯಾತ ವಿಶ್ವ ವಿದ್ಯಾಲಯಗಳೊಂದಿಗೆ ಸಹಯೋಗ ಹೊಂದಿದ್ದೇವೆ ಎಂದು ಪೀಕೇ ಗ್ರೂಪ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಇ.ಶಾನವಾಜ್ ಹೇಳಿದರು.

Edited By : Nirmala Aralikatti
Kshetra Samachara

Kshetra Samachara

23/07/2022 10:19 am

Cinque Terre

1.08 K

Cinque Terre

0

ಸಂಬಂಧಿತ ಸುದ್ದಿ