ಬೆಂಗಳೂರು : ಗಬ್ಬು ವಾಸನೆಯಿಂದ ಬೆಸತ್ತ ಬಿಟಿಎಂ ಲೇಔಟ್ ಮಂದಿ ಮನೆ ತೊರೆಯುತ್ತಿದ್ದಾರೆ. ನಿತ್ಯ ಕಸದ ವಾಸನೆಯಿಂದ ನರಕಯಾತನೆ ಅನುಭವಿಸುತ್ತಿರುವ ಜನರ ಗೋಳು ಕೇಳುವವರು ಯಾರು ಇಲ್ಲದ ಕಾರಣ ಜನ ಮನೆ ತೊರೆಯುತ್ತಿದ್ದಾರೆ.
ಹೌದು ಕಸದಿಂದ ಬೇಸತ್ತ ಬಿಟಿಎಂ ಲೇಔಟ್ ನ 16ನೇ ಮುಖ್ಯರಸ್ತೆ 15ನೇ ಕ್ರಾಸ್ ನ ಜನ ಪಾಲಿಕೆಗೆ ಹಿಡಿಶಾಪ ಹಾಕಿ ಮನೆ ಬಿಡುತ್ತಿದ್ದಾರೆ.
ದಿನವೂ ಬಿಬಿಎಂಪಿ ಕಸದ ಗಾಡಿ ಬಂದರೂ ಕೂಡ ಇಲ್ಲಿ ವಾಸಿಸುತ್ತಿರುವ ಉತ್ತರಭಾರತೀಯರು ಬೆಳಗ್ಗೆ ಎದ್ದು ಕಸವನ್ನು ಗಾಡಿಗೆ ನೀಡದೆ ರಸ್ತೆಯ ಮೇಲೆ ಬಿಸಾಡುತ್ತಿರುವ ಬಗ್ಗೆ ಇಲ್ಲಿನ ನಿವಾಸಿಗಳು ಬಿಬಿಎಂಪಿಗೆ ದೂರು ಕೂಡ ನೀಡಿದ್ದಾರೆ.
ಕೇಳಲು ಬಂದ ಬಿಬಿಎಂಪಿ ಅಧಿಕಾರಿಗಳ ಮೇಲೆ ದರ್ಪ ತೋರಿದ ಉತ್ತರ ಭಾರತೀಯ ಮಹಿಳೆಯರು ಎಷ್ಟು ಬಾರಿ ಬಿಬಿಎಂಪಿ ಕ್ಲೀನ್ ಮಾಡಿದರೂ ಸಹ ಇಲ್ಲಿಯೆ ಕಸ ಚಲ್ಲುವುದನ್ನು ಮುಂದುವರೆಸಿದ್ದಾರೆ.
ಅಷ್ಟೇ ಅಲ್ಲದೆ ರಾತ್ರಿಯ ವೇಳೆ ಬಂದು ಉತ್ತರ ಭಾರತೀಯರು ಕಸ ಹಾಕಿ ಹೋಗುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಈ ಕಸದ ಸಮಸ್ಯೆಯಿಂದ ಹಲವಾರು ಮನೆಗಳು ಖಾಲಿಯಾಗಿದ್ದು ಬೇರೆ ಯಾರು ಕೂಡಾ ಮನೆಗೆ ಬರುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಇಂದು ಖುದ್ದಾಗಿ ಬಿಬಿಎಂಪಿ ಮಾರ್ಷಲ್ ಗಳು ಕಸದ ಪಾಯಿಂಟ್ ನ್ನು ಸ್ವಚ್ಛಗೊಳಿಸಿ ಪೇಂಟ್ ಮಾಡಿದರು. ಸ್ಥಳದಲ್ಲಿ ಇಂದಿನಿಂದ ಮಾರ್ಷಲ್ ಗಳನ್ನು ನೇಮಿಸಿ ಕಸ ಹಾಕುವವರಿಗೆ ದಂಡ ಹಾಕಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.
ಇನ್ನಾದರೂ ಇಲ್ಲಿಯ ಕಸದ ಮಸ್ಯೆ ತೀರಲಿದಿಯೇ ಎನ್ನುವುದನ್ನು ಕಾದು ನೋಡಬೇಕಿದೆ.
-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
12/07/2022 10:38 am