ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗೂಡ್ ಶೆಡ್ ರಸ್ತೆಯಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ಪೂರ್ಣ; ವಾಹನಗಳ ಸಂಚಾರಕ್ಕೆ ಮುಕ್ತ

ಬೆಂಗಳೂರು: ನಗರದ 1.31 ಕಿ.ಮೀ ಉದ್ದದ ಗೂಡ್ ಶೆಡ್ (ಡಾ. ಟಿ.ಸಿ.ಎಮ್. ರಾಯನ್) ರಸ್ತೆಯಲ್ಲಿ ಕೈಗೆತ್ತಿಕೊಂಡಿದ್ದ ವೈಟ್‌ಟಾಪಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಿ ಶುಕ್ರವಾರ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ನಗರದ ಗೂಡ್ ಶೆಡ್ (ಡಾ.ಟಿ.ಸಿ.ಎಮ್. ರಾಯನ್) ರಸ್ತೆಯಲ್ಲಿ ವೈಟ್‌ಟಾಪಿಂಗ್ ಅಳವಡಿಸಲು ಸರ್ಕಾರದಿಂದ ಅನುಮೋದನೆ ಆಗಿದ್ದು ಸದರಿ ರಸ್ತೆಯಲ್ಲಿ ಮೊದಲನೆಯ ಹಂತದಲ್ಲಿ ಡಾ. ಭಾಲಗಂಗಾಧರನಾಥ ಸ್ವಾಮೀಜಿ ಪ್ಲೈ ಒವರ್ ಡೌನ್ ರ‍್ಯಾಂಪ್‌ನಿಂದ ಬೇಲಿ ಮಠ ರಸ್ತೆವರೆಗೆ 550 ಮೀಟರ್ ಉದ್ದಕ್ಕೆ ಕಾಮಗಾರಿ ಪ್ರಾರಂಭಿಸಲು ಉಲ್ಲೇಖ(1)ರಂತೆ ಪೋಲಿಸ್(ಸಂಚಾರ)ರವರಿಂದ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಲಾಗಿತ್ತು.

ಕಾಮಗಾರಿಯ ಮೂಲ ಯೋಜನೆಯಲ್ಲಿ ಒಳಚರಂಡಿ ಮತ್ತು ನೀರಿನ ಕೊಳವೆಗಳನ್ನು ಅಳವಡಿಸುವ ಪ್ರಸ್ತಾವನೆ ಇರಲಿಲ್ಲ. ಕಾಮಗಾರಿಯನ್ನು ಪ್ರಾರಂಭಿಸಿದ ನಂತರ ಸ್ಥಳೀಯರ ಹಾಗೂ ಜಲಮಂಡಳಿಯ ಕೋರಿಕೆಯಂತೆ ಹೆಚ್ಚುವರಿ ಒಳಚರಂಡಿ ಮತ್ತು ನೀರಿನ ಕೊಳವೆಗಳನ್ನು ಅಳವಡಿಸಲು ಅಗೆತದ ಕಾಮಗಾರಿಯ ಸಮಯದಲ್ಲಿ ಗಟ್ಟಿ ಬಂಡೆ ಅಡ್ಡಬಂದಿದ್ದರಿಂದ ಹಾಗೂ ಕಳೆದ ವರ್ಷದ ಆಗಸ್ಟ್‌ನಿಂದ ನವೆಂಬರ್‌ವರೆಗೂ ನಗರದಲ್ಲಿ ಹೆಚ್ಚು ಮಳೆಯಾದುದರಿಂದ ಮತ್ತು ಬೃಹತ್ ಮಳೆ ನೀರುಗಾಲುವೆ ಕಾಮಗಾರಿಯನ್ನೂ ಸಹ ಕೈಗೊಂಡಿದ್ದರಿಂದ ಸದರಿ ಭಾಗದಲ್ಲಿ ತುಸು ವಿಳಂಭವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸ್ಥಳೀಯ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಸದರಿ ರಸ್ತೆಯ ಉಳಿದ ಭಾಗದಲ್ಲಿ ಬೇಲಿ ಮಠ ರಸ್ತೆಯಿಂದ ಶಾಂತಲಾ ಸಿಲ್ಕ್ ವೃತ್ತದವರೆಗೆ 760 ಮೀಟರ್ ಉದ್ದಕ್ಕೆ ವೈಟ್ ಟಾಪಿಂಗ್ ಅಳವಡಿಸಲು ಪೋಲಿಸ್(ಸಂಚಾರ) ರವರು ಉಲ್ಲೇಖ(2) ರಂತೆ ದಿನಾಂಕ 19.05.2022 ರಂದು ಅನುಮತಿಯನ್ನು ನೀಡಿರುತ್ತಾರೆ.

ಅಧಿಸೂಚನೆ ಹೊರಡಿಸಿದ ನಂತರ ಸದರಿ ಭಾಗದಲ್ಲಿ ಕಾಮಗಾರಿಯನ್ನು ದಿನಾಂಕ:01.06.2022 ರಿಂದ ಪ್ರಾರಂಭಿಸಿ ಜೂನ್ ತಿಂಗಳಲ್ಲಿ ನಗರದಲ್ಲಿ ವ್ಯಾಪಕವಾಗಿ ಮಳೆ ಇದ್ದರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಯಂತ್ರೋಪಕರಣ ಮತ್ತು ಮಾನವ ಸಂಪನ್ಮೂಲಗಳನ್ನು ನಿಯೋಜಿಸಿಕೊಂಡು ಒಳಚರಂಡಿ ಕೊಳವೆಗಳು, ನೀರಿನ ಕೊಳವೆಗಳು, ಬೆಸ್ಕಾಂ ಉಪಯುಕ್ತತೆಗಳನ್ನು ಅಳವಡಿಸಲು ಡಕ್ಟ್ಗಳ ನಿರ್ಮಾಣ ಒಳಗೊಂಡಂತೆ ಕ್ಯಾರೇಜ್‌ವೇ ಕಾಮಗಾರಿಯನ್ನು 30 ಕೆಲಸದ ದಿನಗಳಲ್ಲಿ ಪೂರ್ಣಗೊಳಿಸಿ ನಿನ್ನೆಯಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿರುತ್ತದೆ.

Edited By : Vijay Kumar
Kshetra Samachara

Kshetra Samachara

09/07/2022 12:47 pm

Cinque Terre

1.09 K

Cinque Terre

0

ಸಂಬಂಧಿತ ಸುದ್ದಿ