ಬೆಂಗಳೂರು: ಡಾಂಬರ್ ಇಲ್ಲದ ರಸ್ತೆಗಳು.. ಬೇಸಿಗೆಯಲ್ಲಿ ಧೂಳಿನ ಸ್ನಾನ..ಮಳೆ ಬಂದರೆ ಕೆಸರಿನ ಸಿಂಚನ.. ಹೀಗಿದೆ ನೋಡಿ ಇಲ್ಲಿ ರಸ್ತೆಯ ಸ್ಥಿತಿ ದಿನನಿತ್ಯ ವಾಹನ ಸವಾರರು ಹಿಡಿಶಾಪ ಹಾಕಿಕೊಂಡೆ ರಸ್ತೆಯ ಮೇಲೆ ಓಡಾಡುತ್ತಿದ್ದಾರೆ.
ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕಲ್ಲೇನ ಅಗ್ರಹಾರದ ಮೀನಾಕ್ಷಿ ಬಡಾವಣೆಯಲ್ಲಿ. ಇದೇ ಲೇಔಟ್‌ನ ಅರ್ಧ ಭಾಗ ಕಾಮಗಾರಿ ಮುಗಿದಿದ್ದು ಇನ್ನು ಅರ್ಧ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಲೇಔಟ್ ನಿವಾಸಿಗಳು ದಿನನಿತ್ಯ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ಕೂಡಲೇ ಕೆಲಸ ಕಾಮಗಾರಿ ವೇಗವಾಗಿ ಮುಗಿಸಿ ಮೀನಾಕ್ಷಿ ಲೇಔಟ್‌ನ ಜನರಿಗೆ ಓಡಾಡಲು ಒಳ್ಳೆ ರಸ್ತೆ ಮಾಡಿಕೊಡಬೇಕು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
07/07/2022 09:29 pm