ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಇಂದು ಬೆಂಗಳೂರಿನ ಯಲಹಂಕ ಏರ್ ಪೋರ್ಸ್ ಸ್ಟೇಷನ್ ಗೆ ಆಗಮಿಸಲಿದ್ದಾರೆ.
ಪ್ರಧಾನಿಗಳ ಭದ್ರತೆ ಸಲುವಾಗಿ ಏರ್ ಪೋರ್ಟ್ ರಸ್ತೆ ಬೆಳಗ್ಗೆ 11ರಿಂದ 1 ಗಂಟೆವರೆಗೂ ಬಂದ್ ಆಗಲಿದೆ. ಈ ಹಿನ್ನೆಲೆಯಲ್ಲಿ ಏರ್ ಪೋರ್ಟ್ ಗೆ ಹೋಗುವ ಮತ್ತು ಬರುವ ಪ್ರಯಾಣಿಕರು ಏರ್ ಪೋರ್ಟ್ ರಸ್ತೆ ಬದಲಿಗೆ ಪರ್ಯಾಯ ರಸ್ತೆಗಳಲ್ಲಿ ಸಂಚರಿಸಲು ನಗರ ಸಂಚಾರಿ ಪೊಲೀಸರು ಸೂಚಿಸಿದ್ದಾರೆ.
ಆದ್ದರಿಂದ ಹೆಬ್ಬಾಳ ಫ್ಲೈಓವರ್ ಮೇಲೆ ಮತ್ತು ಸುತ್ತಮುತ್ತ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಟ್ರಾಫಿಕ್ ಜಾಮ್ ನಲ್ಲಿ ಆ್ಯಂಬುಲೆನ್ಸ್ ಸಿಕ್ಕಿ ಹಾಕಿಕೊಂಡು ಸ್ವಲ್ಪ ಹೊತ್ತು ಪರದಾಡುವಂತಾಯ್ತು. ಹಾಗೆಯೇ ಬೈಕ್ ಮತ್ತಿತರ ವಾಹನ ಸವಾರರೂ ಸ್ಲೋ ಮೂವಿಂಗ್ ಟ್ರಾಫಿಕ್ ಜಾಮ್ ನಿಂದ ಹೈರಾಣಾಗಿದ್ದಾರೆ.
Kshetra Samachara
20/06/2022 12:40 pm