ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ʼರಾಜರಾಜೇಶ್ವರಿ ಬಡಾವಣೆʼ ಅನುದಿನವೂ ನೀರಿನ ಬವಣೆ; ಜನ ಹೈರಾಣ

ಬೆಂಗಳೂರು: ಹೇಳಿ-ಕೇಳಿ... ಸಿಲಿಕಾನ್ ಸಿಟಿ ಉದ್ಯಾನನಗರ ಅಂತಾನೇ ಫೇಮಸ್. ನಗರದಲ್ಲಿ ಯಾವ ಕಡೆ ಹೋದರೂ ಗಗನಚುಂಬಿ ಕಟ್ಟಡಗಳೇ. ಆದರೆ, ಇಲ್ಲೊಂದು ಏರಿಯಾ ಇದೆ... ಅಲ್ಲಿಗೋದರೆ ಥೇಟ್‌ ಹಳ್ಳಿಯಂತೆಯೇ ಜನರೆಲ್ಲ ಕುಡಿಯುವ ನೀರಿಗಾಗಿ ಪರದಾಡುತ್ತಾರೆ. ಯಾವುದು ಆ ಏರಿಯಾ ಅನ್ಕೊಂಡ್ರಾ! ಹಾಗಾದರೆ ಈ ಸ್ಟೋರಿ ನೋಡಿ...

ಹೀಗೆ ಜನರು ಕೈಯಲ್ಲಿ ಖಾಲಿ ಕೊಡ ಇಟ್ಕೊಂಡು ಓಡಾಡುತ್ತಿರುವ ದೃಶ್ಯ ಒಂದೆಡೆಯಾದರೆ... ಮನೆ ಮುಂದೆ ಡ್ರಮ್, ಕ್ಯಾನ್‌ ನಲ್ಲಿ ನೀರು ತುಂಬಿಸುತ್ತಿರುವ ದೃಶ್ಯ ಇನ್ನೊಂದೆಡೆ . ಈ ನೋಟ ಕಂಡು ಬಂದಿದ್ದು ಬೆಂಗಳೂರಿನ ಹೊರವಲಯದಲ್ಲಿ ಅಲ್ಲ, ಬದಲಾಗಿ ಮಹಾನಗರದ ಒಳಗೆಯೇ! ಇದು ಬನಶಂಕರಿಯ ರಾಜರಾಜೇಶ್ವರಿ ಬಡಾವಣೆ. ಇಲ್ಲಿನ ಜನ ಕುಡಿಯುವ ನೀರಿಗಾಗಿ ಹಲವು ವರ್ಷಗಳಿಂದ ಬವಣೆ ಪಡುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ.

ಈ ಬಡಾವಣೆಗೆ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ನೀರನ್ನು ದಿನಬಿಟ್ಟು ದಿನ ಏನೋ ಬಿಡ್ತಾರೆ. ಆದರೆ, ನೀರು ಬಿಡಲು ನಿಗದಿತ ಟೈಮೇ ಇಲ್ಲ! ಒಮ್ಮೊಮ್ಮೆ ಮಧ್ಯರಾತ್ರಿ, ಇನ್ನೊಮ್ಮೆ ಮುಂಜಾವ. ಅದು ಕೂಡ ಕೆಲವೇ ಗಂಟೆ ಮಾತ್ರ. ಇದರಿಂದ ಜನರು ನೀರಿಗಾಗಿ ಹೊಡೆದಾಡೋ ಸ್ಥಿತಿ ನಿರ್ಮಾಣಗೊಂಡಿದೆ. ಅಷ್ಟೇ ಏಕೆ? ನೀರಿಗಾಗಿ ಇಲ್ಲಿ ಮರ್ಡರ್ ಕೂಡ ಆಗಿದೆಯಂತೆ! ಸರಕಾರ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆಯಾದರೂ ಇಲ್ಲಿಯವರೆಗೂ ಅದು ತೆರೆದಿಲ್ಲ.

- ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು

Edited By : Nagesh Gaonkar
PublicNext

PublicNext

13/06/2022 10:25 pm

Cinque Terre

29.17 K

Cinque Terre

1

ಸಂಬಂಧಿತ ಸುದ್ದಿ