ಬೆಂಗಳೂರು - ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿರುವ ಕಾರ್ಡ್ ರಸ್ತೆಯಲ್ಲಿ ತಲೆ ಎತ್ತುತ್ತಿರುವ ಪ್ಲೈ ಓವರ್ ಆದರೆ ಕಾಮಗಾರಿ ಆರಂಭವಾಗಿ ನಾಲ್ಕು ವರ್ಷ ವಾದ್ರೂ ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಆ ಕುರಿತಾದ ಕಂಪ್ಲೀಟ್ ಸ್ಟೋರಿ ನೀವೇ ನೋಡಿ.
ಹೀಗೆ ಅರ್ಧಂ ಬರ್ಧ ಕಾಮಗಾರಿ, ಅಲ್ಲಲ್ಲಿ ಸಣ್ಣ- ಪುಟ್ಟ ಕೆಲಸ ಮಾಡ್ತಿರುವ ಕಾರ್ಮಿಕರು.. ಇದರ ನಡುವೆ ಸಾಲುಗಟ್ಟಿ ಸಂಚರಿಸುತ್ತಿರುವ ವಾಹನ ಸವಾರರು.
ಇದು ವಿಜಯ ನಗರದಿಂದ ಬಸವೇಶ್ವರ ನಗರಕ್ಕೆ ತಲುಪುವ ವೆಸ್ಟ್ ಆಫ್ ಕಾರ್ಡ್ ಮೇಲು ಸೇತುವೆ ಕಾಮಗಾರಿ ಸ್ಥಿತಿ. ಕಳೆದ ನಾಲ್ಕು ವರ್ಷದ ಹಿಂದೆ ಆರಂಭವಾದ ಈ ಕಾಮಗಾರಿ ಇನ್ನೂ ಆಮೇಗತಿಯಲ್ಲಿ ಸಾಗುತ್ತಿದೆ. 21 ಕೋಟಿ ವೆಚ್ಚದ 400 ಮೀಟರ್ ಉದ್ದ ಪ್ಲೈ ಓವರ್ ಕಾಮಗಾರಿ ಸದ್ಯ ಸ್ಥಗಿತವಾಗಿದೆ. ಕಾರಣ ಗುತ್ತಿಗೆ ಪಡೆದವರಿಗೆ ಸರ್ಕಾರದಿಂದ ಅನುಮತಿ ದೊರೆತಿಲ್ಲ.
ಇನ್ನೂ ನಾಲ್ಕು ತಿಂಗಳ ಕಾಲಮೀತಿ ಗುತ್ತಿಗೆದಾರರಿಗೆ ನೀಡಲಾಗಿದೆ. ಆದರೆ ಸರ್ಕಾರದಿಂದಲೇ ಅನುಮತಿ ದೊರೆತಿಲ್ಲ. ಹೀಗಿ ರುವಾಗ ಕಾಮಗಾರಿ ಆರಂಭಿಸೋದು ಹೇಗೆ ಎನ್ನುವ ಪ್ರಶ್ನೆ ಗುತ್ತಿಗೆದಾರರದ್ದು.
ಇತ್ತ ಕಾಮಗಾರಿ ಕುಂಟುತ್ತಾ ಸಾಗ್ತಿರೋ ಪರಿಣಾಮ ಬಸವೇಶ್ವರ ನಗರ, ಶಿವನಹಳ್ಳಿ, ರಾಜಾಜಿ ನಗರ, ಮಾಗಡಿ ರಸ್ತೆ, ವಿಜಯ ನಗರ ಮೆಜೆಸ್ಟಿಕ್ ಹೋಗುವ ಸಾವಿರಾರು ವಾಹನ ಸವಾರರಿಗೆ ನಿತ್ಯ ಟ್ರಾಫಿಕ್ ಜಾಮ್ ಕಿರಿಕಿರಿ. ಸಂಚಾರ ದುಸ್ಥರವಾಗಿದ್ದು, ಕಾಮಗಾರಿ ಮುಗಿದ್ರೆ ಸಾಕಪ್ಪ ಅಂತಿದ್ದಾರೆ.
ಗಣೇಶ್ ಹೆಗಡೆ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
02/06/2022 05:40 pm