ಬೆಂಗಳೂರು: ವಿದ್ಯುತ್ ಸಂಬಂಧಿತ ಸಾರ್ವಜನಿಕರ ಕುಂದು ಕೊರತೆಗಳ ಪರಿಹಾರಕ್ಕೆ ಬಿಡುಗಡೆಗೊಂಡ ಬೆಸ್ಕಾಂನ 8 ಜಿಲ್ಲೆಗಳ 11 ವಾಟ್ಸ್ ಆ್ಯಪ್ ಸಹಾಯವಾಣಿ ಸಂಖ್ಯೆಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಾಟ್ಸ್ ಆ್ಯಪ್ ಸಹಾಯವಾಣಿ ಬಿಡುಗಡೆಗೊಂಡ ಕೇವಲ ಒಂದು ವಾರದಲ್ಲಿ 736 ದೂರಗಳನ್ನು ಸ್ವೀಕರಿಸಿದ್ದು, 628 ದೂರುಗಳನ್ನು ಬಗೆಹರಿಸಲಾಗಿದೆ.
ವಿದ್ಯುತ್ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಬೆಸ್ಕಾಂನ 8 ಜಿಲ್ಲೆಗಳಿಗೆ 11 ‘ವಾಟ್ಸ್ ಆ್ಯಪ್ ಸಹಾಯವಾಣಿ’ ಸಂಖ್ಯೆಗಳನ್ನು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಮೇ 24 ರಂದು ಬಿಡುಗಡೆ ಮಾಡಿದ್ದರು.
ಗ್ರಾಹಕರ ವಿದ್ಯುತ್ ಸಮಸ್ಯೆಗಳ ತುರ್ತು ಪರಿಹಾರಕ್ಕೆ ಬಿಡುಗೊಂಡ ವಾಟ್ಸ್ ಆ್ಯಪ್ ಸಹಾಯವಾಣಿ ಸಂಖ್ಯೆಗಳಿಗೆ ಗ್ರಾಹಕರು ಕೇವಲ ಸಂದೇಶ ಕಳುಹಿಸಲು ಕೋರಲಾಗಿತ್ತು. ಆದರೆ ಇದೀಗ ಗ್ರಾಹಕರು ತಮ್ಮ ವ್ಯಾಪ್ತಿಯಲ್ಲಿನ ವಿದ್ಯುತ್ ಸಮಸ್ಯೆಗಳ ಕುರಿತು ಫೋಟೋ ಮತ್ತು ವಿಡಿಯೋ ತುಣುಕುಗಳನ್ನು ವಾಟ್ಸ್ ಆ್ಯಪ್ ಸಹಾಯವಾಣಿಗೆ ಕಳುಹಿಸುತ್ತಿದ್ದಾರೆ.
1912 ಸಹಾಯವಾಣಿ ಕೇಂದ್ರದ ವಾಟ್ಸ್ ಆ್ಯಪ್ ಸಹಾಯವಾಣಿ ಸಿಬ್ಬಂದಿ ತಕ್ಷಣವೇ ದೂರು ಸ್ವೀಕರಿಸಿ, ಗ್ರಾಹಕರಿಗೆ ಸ್ವೀಕೃತಿ ಸಂಖ್ಯೆ ಕಳುಹಿಸಿ, ದೂರುಗಳನ್ನು ಸಂಬಂ ಧಿಸಿದ ಬೆಸ್ಕಾಂ ಜಿಲ್ಲೆಗಳಿಗೆ ಕಳುಹಿಸಿ ಪರಿಹಾರಕ್ಕೆ ಸೂಚಿಸುತ್ತಾರೆ. ಸಚಿತ್ರ ಸಮೇತ ದೂರುಗಳನ್ನು ಆಯಾ ಜಿಲ್ಲೆಗಳ ಬೆಸ್ಕಾಂ ಅಧಿಕಾರಿಗಳಿಗೆ ಕಳುಹಿಸುವುದರಿಂದ ದೂರುಗಳ ಶೀಘ್ರ ಪರಿಹಾರ ಆಗುತ್ತಿದೆ ಎಂದು ಬೆಸ್ಕಾಂ ನ ಗ್ರಾಹಕ ಸಂಬಂಧಗಳ ವ್ಯವಸ್ಥಾಪಕ ಎಸ್. ಆರ್. ನಾಗರಾಜ್ ತಿಳಿಸಿದರು.
ಬೆಸ್ಕಾಂ ವಾಟ್ಸ್ ಆ್ಯಪ್ ಸಹಾಯವಾಣಿ ವಿವರ
ಬೆಂಗಳೂರು ನಗರ ಜಿಲ್ಲೆ :
ದಕ್ಷಿಣ ವೃತ್ತ: 8277884011, ಪಶ್ಚಿಮ ವೃತ್ತ: 8277884012, ಪೂರ್ವ ವೃತ್ತ: 8277884013, ಉತ್ತರ ವೃತ್ತ: 8277884014.
ಕೋಲಾರ ಜಿಲ್ಲೆ : 8277884015, ಚಿಕ್ಕಬಳ್ಳಾಪುರ ಜಿಲ್ಲೆ: 8277884016, ಬೆಂಗಳೂರು ಗ್ರಾಮಾಂತರ ಜಿಲ್ಲೆ : 8277884017, ರಾಮನಗರ ಜಿಲ್ಲೆ : 8277884018, ತುಮಕೂರು ಜಿಲ್ಲೆ : 8277884019, ಚಿತ್ರದುರ್ಗ ಜಿಲ್ಲೆ : 8277884020, ದಾವಣಗರೆ ಜಿಲ್ಲೆ: 8277884021
Kshetra Samachara
01/06/2022 10:04 pm