ಬೆಂಗಳೂರು: ಈ ರಸ್ತೆಗೆ ಬಂದ್ರೆ ಸಂಚಾರ ಬಲು ತ್ರಾಸದಾಯಕ. ವಾಹನ ಚಾಲಕ- ಪ್ರಯಾಣಿಕರೆಲ್ಲ ಜೀವ ಕೈನಲ್ಲೇ ಇಟ್ಕೋಬೇಕಾಗುತ್ತೆ. ಇನ್ನು, ರಸ್ತೆ ಮಧ್ಯೆ ಮನುಷ್ಯನಷ್ಟೇ ಉದ್ದ ಇರುವ ಗುಂಡಿಗಳೇ ರಾರಾಜಿಸುತ್ತಿವೆ. ಒಂಚೂರು ಮೈಮರೆತು, ವಾಹನ ಚಲಾಯಿಸಿದ್ರೆ ಗಾಡಿ-ಬಾಡಿ ಎರಡೂ ಏಟು ಮಾಡ್ಕೊಳ್ಳೋದಂತೂ ಗ್ಯಾರಂಟಿ! ಒಟ್ಟಿನಲ್ಲಿ ಇಷ್ಟೊಂದು ಹದಗೆಟ್ಟ ಈ ರಸ್ತೆ ಎಲ್ಲಿದ್ಯಪ್ಪ ? ನಾವು ಯಾವ್ದೇ ಕಾರಣಕ್ಕೂ ಈ ರಸ್ತೆಗೆ ಹೋಗಬಾರ್ದು ಅನ್ನೋದಾದ್ರೆ, ಒಮ್ಮೆ ಈ ಸ್ಟೋರಿ ನೋಡಿ...
ಈ ರಸ್ತೆ ಇರೋದು ಕೆಂಗೇರಿ ಉತ್ತರಳ್ಳಿ ಕ್ರಾಸ್ ಹತ್ತಿರ. ನಗರದಲ್ಲಿ ಎಲ್ಲಿ ರಸ್ತೆ ಹಾಳಾಗಿತ್ತೊ ಅಲ್ಲಿ ಈ BWSS ನವರ ಕೈ ಚಳಕ ಇದ್ದೇ ಇರುತ್ತೆ. ಹೌದು, ಈ ರಸ್ತೆ ಸಹ ಹಾಳಾಗಿರೋದು BWSS ನವರ ಬೇಜವಾಬ್ದಾರಿಯಿಂದಲೇ. ರಸ್ತೆ ಮಧ್ಯೆ ಗುಂಡಿ ತೋಡುವುದು, ಹಾಗೇ ಬಿಡುವುದು. ಮುಚ್ಚಿದ್ರುನೂ ಕಾಟಾಚಾರಕ್ಕೆ ಮುಚ್ಚುವುದು! ಈ ಬಗ್ಗೆ ಮಾಧ್ಯಮಗಳು ಸಾಲುಸಾಲಾಗಿ ಸ್ಟೋರಿ ಮಾಡಿದ್ರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ತಿಲ್ಲ.
ರಸ್ತೆಯ ಶೋಚನೀಯ ಸ್ಥಿತಿಯಿಂದಾಗಿ ಜನರು ಅಂಗಡಿಗಳಿಗೂ ಬರ್ತಿಲ್ಲ, ವ್ಯಾಪಾರ ಡಲ್ ಆಗಿದೆ ಅಂತಾರೆ ವ್ಯಾಪಾರಸ್ಥರು. ಇನ್ನು, ವಾಹನ ಸವಾರರ ಗೋಳು ಕೇಳೋರೆ ಇಲ್ಲ. ದಿನಕ್ಕೆ ಏನಿಲ್ಲ ಅಂದ್ರು 20- 30 ಮಂದಿ ಬೀಳ್ತಾನೆ ಇರ್ತಾರೆ! ಇದೆಲ್ಲದ್ದಕ್ಕೂ ಎಲೆಕ್ಷನ್ ಹತ್ತಿರ ಬಂದಗಾದ್ರೂ ಮುಕ್ತಿ ಸಿಗುತ್ತೆ ಅನ್ನಿಸುತ್ತೆ. ಆಗಲಾದರೂ ಈ ರಸ್ತೆಗೆ ಕಾಂಕ್ರೀಟ್ ಅಥವಾ ಟಾರ್ ಹಾಕ್ತಾರಾ? ಕಾದು ನೋಡೋಣ...
-ರಂಜಿತಾ ಸುನಿಲ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
Kshetra Samachara
23/05/2022 08:31 pm