ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳನ್ನು ಒಮ್ಮೊಮ್ಮೆ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ಅಥವಾ ಬೆಸ್ಕಾಂ ಸಿಬ್ಬಂದಿ ಅಗೆದು ಹಾಕುತ್ತಾರೆ. ನೆಕ್ಸ್ಟ್ ಬರುವುದೇ ಈ ಖಾಸಗಿ ಮೊಬೈಲ್ ಟವರ್ ಕಂಪನಿಗಳು. ಹೌದು, ಖಾಸಗಿ ಕಂಪನಿಗಳು ಬಿಬಿಎಂಪಿಯಿಂದ ಅನುಮತಿ ಪಡೆದು ರಸ್ತೆ ಅಗೆದು ಹಾಕುತ್ತಾರೆ. ಬಿಬಿಎಂಪಿ ಪ್ರಕಾರ ಇವರು ಅಗೆದು ಹಾಕುವ ರಸ್ತೆಗಳನ್ನು ಟಾರ್ ಹಾಕಿ ಮತ್ತೆ ಅದೇ ರಸ್ತೆ ರೀತಿ ಮಾಡಿ ಕೊಡಬೇಕು. ಆದರೆ, ಈ ಕಂಪನಿಗಳು ಕಾಟಾಚಾರಕ್ಕೆ ಟಾರ್ ಹಾಕಿ ಅಲ್ಲಿಂದ ಕಾಲ್ಕಿಳುತ್ತಾರೆ.
ಇದು ಬಿಟಿಎಂ ಲೇಔಟ್ ನ 16ನೇ ಕ್ರಾಸ್ ನೋಟ. ಇಲ್ಲಿ ಕೂಡ ಖಾಸಗಿ ಕಂಪನಿ, ರಸ್ತೆ ಅಗೆದು ಕಾಟಾಚಾರಕ್ಕೆ ಟಾರ್ ಹಾಕಿ ಹೋಗಿದ್ದಾರೆ. ಟಾರ್ ಗುಣಮಟ್ಟ ಎಷ್ಟು ಕಳಪೆಯಾಗಿದೆ ಎಂದರೆ ಗುಂಡಿ ಬಿದ್ದು, ದ್ವಿಚಕ್ರ ವಾಹನ ಸವಾರರು ದಿನವೂ ಬೀಳುವಂತಾಗಿದೆ.
ಗುಂಡಿಗಳಿಂದಾಗಿ ನಿರಂತರ ಅಪಘಾತ ಸಂಭವಿಸುತ್ತಿರುವ ಕಾರಣ ಈ ಸ್ಥಳ ಆಕ್ಸಿಡೆಂಟ್ ಸ್ಪಾಟ್ ಆಗಿದೆ. ರಾತ್ರಿ ವೇಳೆ ಬೆಸ್ಕಾಂ ನಿರ್ಲಕ್ಷ್ಯದಿಂದ ಸ್ಟ್ರೀಟ್ ಲೈಟ್ ಗಳೂ ಆನ್ ಆಗುತ್ತಿಲ್ಲ. ರಸ್ತೆ ಕಳಪೆ ಕಾಮಗಾರಿಯಿಂದ ನಮಗೆ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಬಿಬಿಎಂಪಿ ವಿರುದ್ಧ ಕಿಡಿಕಾರಿದರು.
ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
Kshetra Samachara
21/05/2022 10:59 pm