ಬೆಂಗಳೂರು: ತಡರಾತ್ರಿ ಸುರಿದ ಧಾರಕಾರ ಮಳೆಗೆ ಸಿಲಿಕಾನ್ ಸಿಟಿ ಅಕ್ಷರಶಃ ಮುಳುಗಿ ಹೋಗಿದೆ.ಒಂದು ಕಡೆ ಮನೆಗಳಿಗೆ ನೀರು ನುಗ್ಗಿದ್ದರೆ, ಮತ್ತೊಂದು ಕಡೆ ಗ್ಯಾರೇಜ್ ಗೂ ಕೂಡ ನೀರು ನುಗ್ಗಿ ಗ್ಯಾರೇಜ್ ಮಾಲೀಕರು ಕಷ್ಟ ಅನುಭವಿಸುವಂತಾಗಿದೆ.
ರಾಜಕಾಲುವೆಯಿಂದ ಬಂದ ನೀರು ಕಾರು, ಬೈಕ್ ಗಳನ್ನ ಮುಳುಗಿಸಿದೆ. ರಾತ್ರಿಯಿಂದಲೇ ಗ್ಯಾರೇಜ್ ಮಾಲೀಕರು, ಕೆಲಸಗಾರರು ಬಂದು ನೋಡಿದಾಗ ಗ್ಯಾರೇಟ್ ಪೂರ್ತಿಯು ಮುಳುಗಿ ಹೋಗಿತಂತ್ತೆ, 3 ಟು ವ್ಹೀಲರ್‌ಗಳು ಮುಳುಗಿದ ಪರಿಣಾಮ, ಇಂಜಿನ್ ಗಳು ಸೀಜ್ ಆಗಿದ್ಯಂತೆ. 2 ಕಾರುಗಳಿಗೆ ರಾಜಕಾಲುವೆಯ ಗಲೀಜು ನೀರು ಸಂಪೂರ್ಣ ಭರ್ತಿಯಾಗಿದೆ.
ಬರೋಬ್ಬರಿ 3 ರಿಂದ 4 ಲಕ್ಷ ಲಾಸ್ ಆಗಿದೆ ಅನ್ತಿದ್ದಾರೆ ಗ್ಯಾರೇಜ್ ಮಾಲೀಕರು. ಇವರ ಜೊತೆಗೆ ನಮ್ಮ ರಿಪೋರ್ಟರ್ ರಂಜಿತಾ ನಡೆಸಿರುವ ಚಿಟ್-ಚಾಟ್ ಇಲ್ಲಿದೆ ನೋಡಿ.
PublicNext
19/05/2022 10:06 am