ಬೆಂಗಳೂರು: ರಸ್ತೆಯ ಮೇಲೆ ತೋಡಿರುವ ಹಳ್ಳದಲ್ಲಿ ಕುಸಿದಿರುವ ಮಣ್ಣು. ಮನೆಯ ಮುಂದೆ ಮಣ್ಣಿನ ಬೆಟ್ಟವೇ ನಿರ್ಮಾಣವಾಗಿದೆ. ಇನ್ನೊಂದು ಕಡೆ ವಾಹನ ಸವಾರರು ಈ ಮಣ್ಣಿನ ರಸ್ತೆಯಲ್ಲಿ ಓಡಾಡಲು ಪರದಾಡುತ್ತಿದ್ದಾರೆ. ಮನೆಯಿಂದ ಆಚೆ ಬರಲು ಸಹ ಏರಿಯಾದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆಲ್ಲ ಕಾರಣ ಯಾರು ಗೊತ್ತಾ.? ಅವರೇ ನಮ್ಮ ಬೆಂಗಳೂರಿನ ಬಿಡಬ್ಲ್ಯೂಎಸ್ಎಸ್‌ಬಿ ಇಲಾಖೆ ರಸ್ತೆಗಳನ್ನು ಅಗೆದು ಹಾಗೆ ಬಿಟ್ಟು ಹೋಗುವ ಇಲಾಖೆ. ಇದು ಬಿಟಿಎಂ ಲೇಔಟ್ ಎರಡನೇ ಹಂತದಲ್ಲಿರುವ ಏಳನೇ ಮೇನ್ ರಸ್ತೆ ಇದು. ಇಲ್ಲಿನ ಜನ ರಸ್ತೆಯ ಮೇಲೆ ಓಡಾಡಲು ಮತ್ತು ತಮ್ಮ ಮನೆಗಳಿಂದ ಆಚೆ ಬರಲು ಪರದಾಡುವ ಸ್ಥಿತಿ ನಿರ್ಮಾಣ ಮಾಡಿರುವ ಬಿಡಬ್ಲ್ಯೂಎಸ್ಎಸ್‌ಬಿ ಅಧಿಕಾರಿಗಳು. ಇಲ್ಲಿನ ರಸ್ತೆಗಳಲ್ಲಿ ಬಿಡಬ್ಲ್ಯೂಎಸ್ಎಸ್‌ಬಿ ತಮ್ಮ ಚೇಂಬರ್ ಲೈನ್‌ಗಳನ್ನು ಸರಿಪಡಿಸಲು ಮುಂದಾಗಿದ್ದರು. ಈ ರಸ್ತೆಯಲ್ಲಿ ಕಾಮಗಾರಿ ಮುಗಿದು ಇಪ್ಪತ್ತು ದಿನಗಳು ಕಳೆದಿವೆ. ಕಾಮಗಾರಿ ಮುಗಿದರೂ ಸಹ ಬಿಡಬ್ಲ್ಯೂಎಸ್ಎಸ್‌ಬಿ ಅಧಿಕಾರಿಗಳು ನಿರ್ಲಕ್ಷ್ಯದಿಂದ ರಸ್ತೆಯ ಮೇಲೆ ಹಾಗೆಯೇ ಮಣ್ಣನ್ನು ಬಿಟ್ಟಿದ್ದಾರೆ.
ಇದರಿಂದ ಈ ರಸ್ತೆಯ ಮೇಲೆ ವಾಹನ ಚಲಿಸಲು ಮತ್ತು ಇಲ್ಲಿನ ನಿವಾಸಿಗಳು ತಮ್ಮ ಮನೆಗಳಿಂದ ಹೊರ ಬರಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಬಿಡಬ್ಲ್ಯೂಎಸ್ಎಸ್‌ಬಿ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಯ ಮೇಲೆ ತುಂಬಿರುವ ಮಣ್ಣನ್ನು ಮತ್ತು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಸರಿಪಡಿಸಬೇಕು.
- ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.-
PublicNext
16/05/2022 05:45 pm