ಬೆಂಗಳೂರು: ಯಾವ ದಿಕ್ಕಿನಿಂದ ಬಂದು ನಿಂತರು ಕೂಡ ಈ ರಸ್ತೆಯ ಮೇಲೆ ಬರೀ ಗುಂಡಿಗಳೇ ಕಾಣಿಸುತ್ತದೆ. ಈ ಲೇಔಟ್ ಜನರಿಗೆ ಈ ರಸ್ತೆಗಳ ಮೇಲೆ ಓಡಾಡಲು ಪರದಾಡುವ ಸ್ಥಿತಿ ಮುಂದಾಗಿದೆ. ಜೆಪಿ ನಗರದ ಅಂಜನಪುರ ಲೇಔಟ್ ಜನರು ರಸ್ತೆ ಗುಂಡಿಗಳಿಂದ ಬೇಸತ್ತು ಹೋಗಿದ್ದಾರೆ.
ಈ ಲೇಔಟ್‌ನ ರಸ್ತೆಗಳ ಮೇಲೆ ಅತಿ ಹೆಚ್ಚು ಲಾರಿಗಳು ದಿನನಿತ್ಯ ಓಡಾಡುವ ಕಾರಣ, ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಇಲ್ಲಿನ ಜನ ಪರದಾಡುವ ಸ್ಥಿತಿ ಬಂದಿದೆ. ರಾತ್ರಿ-ಹಗಲು ಸಂಚರಿಸುವ ಲಾರಿಗಳಿಂದ ಲೇಔಟ್‌ನ ಜನರು ಬೇಸತ್ತು ಹೋಗಿದ್ದಾರೆ. ಅಕ್ಕಪಕ್ಕದಲ್ಲೇ ಹಲವಾರು ಶಾಲಾ-ಕಾಲೇಜುಗಳು ಇದ್ದು ಈ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ.
ಕೂಡಲೇ ಸ್ಥಳೀಯ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಯನ್ನು ಸರಿಪಡಿಸಿ ಮತ್ತು ರಾತ್ರಿ-ಹಗಲು ಓಡಾಡುತ್ತಿರುವ ಲಾರಿಗಳಿಗೆ ಬ್ರೇಕ್ ಹಾಕಬೇಕು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
14/05/2022 09:42 pm