ದೊಡ್ಡಬಳ್ಳಾಪುರ: ಸವರ್ಣೀಯರ ಕೇರಿಗೆ ಸರಾಗವಾಗಿ ಹೋಗುವ ಪಂಚಾಯತ್ ನೀರು ದಲಿತರ ಕೇರಿಗೆ ಬರೋಕ್ಕೆ ಮೀನಾಮೇಷ ಎಣಿಸ್ತಾ ಇದೆ. ನೀರಿನ ವಿಚಾರದಲ್ಲಿ ತಾರತಮ್ಯ ಮಾಡುತ್ತಿರುವ ಪಂಚಾಯತ್ ವಿರುದ್ಧ ಖಾಲಿ ಬಿಂದಿಗೆ ಹಿಡಿದು ಮಹಿಳೆಯರು ಪ್ರತಿಭಟನೆ ನಡೆಸಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮಧುರನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ದಲಿತ ಸಮುದಾಯದ 20 ಕುಟುಂಬಗಳು ನೀರಿಗಾಗಿ ನಿತ್ಯ ಕಷ್ಟ ಪಡ್ತಿದ್ದಾರೆ.
ಹಾದ್ರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಮಧುರನಹೊಸಹಳ್ಳಿ ಗ್ರಾಮ ಬರಲಿದ್ದು, ನೀರಿಗಾಗಿ ಪಂಚಾಯತಿಯವರನ್ನ ಕೇಳಿದ್ರೆ ಇರೋದು ಒಂದೇ ಬೋರ್ ವೇಲ್, ಪದೇ ಪದೇ ವಿದ್ಯುತ್ ಕಡಿತದಿಂದ ಸಮರ್ಪಕವಾಗಿ ನೀರು ಕೊಡಲು ಆಗುತ್ತಿಲ್ಲವೆಂದು ಹೇಳುತ್ತಾರೆ. ಆದರೆ ಸವರ್ಣೀಯರ ಕೇರಿಯಲ್ಲಿ ಮಾತ್ರ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಇದಕ್ಕೆಲ್ಲ ಕಾರಣ ವಾಟರ್ ಮ್ಯಾನ್ ಮುನಿಯಪ್ಪ ಅಂತ ಮಹಿಳೆಯರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಾದ್ರಿಪುರ ಪಂಚಾಯತ್ ಪಿಡಿಓ ಶಿವಾನಂದ್ ಪದೇ ಪದೇ ವಿದ್ಯುತ್ ಕಡಿತದಿಂದ ಸಮರ್ಪಕ ನೀರಿನ ವ್ಯವಸ್ಥೆ ಮಾಡಲು ಸಾದ್ಯವಾಗುತ್ತಿಲ್ಲ. ಈ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡ್ತಿಲ್ಲ. ವಾಟರ್ ಮ್ಯಾನ್ ಮುನಿಯಪ್ಪ ಗ್ರಾಮಸ್ಥರೊಂದಿಗೆ ಅಸಭ್ಯವಾಗಿ ವರ್ತನೆ ತೋರುತ್ತಿರುವ ಬಗ್ಗೆ ದೂರು ಬಂದಿದ್ದು, ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಒಟ್ಟಾರೆ ಕುಡಿಯುವ ನೀರಿನ ವಿಚಾರದಲ್ಲಿ ತಾರತಮ್ಯ ಮಾಡುವುದು ಕಾನೂನುಬಾಹಿರ. ಮೇಲಾಧಿಕಾರಿಗಳು ಈ ಕೂಡಲೇ ಸಮಸ್ಯೆ ಬಗೆಹರಿಸಿ ನೀರಿನ ವ್ಯವಸ್ಥೆ ಮಾಡಿಕೊಡಬೇಕಿದೆ.
Kshetra Samachara
11/05/2022 11:43 am