ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲು ಮುಂದಾದ ಬೆಸ್ಕಾಂ : ಮೀಟರ್ ಡೆಪಾಸಿಟ್ ದರದಲ್ಲಿ ಹೆಚ್ಚಳ..!

ವರದಿ - ಗಣೇಶ್ ಹೆಗಡೆ

ಬೆಂಗಳೂರು: ಬೆಸ್ಕಾಂನಿಂದ ಜನಸಾಮಾನ್ಯರಿಗೆ ಹೊಸ ಡೆಪಾಸಿಟ್ ಆಘಾತ ಎದುರಾಗಿದೆ. ಈ ಡೆಪಾಸಿಟ್ ಹಣವನ್ನು ಪಾವತಿ ಮಾಡದೇ ಇದ್ದರೆ ಅಂಥವರ ಮನೆಯ ಪವರ್ ಕಟ್ ಆಗಲಿದೆ. ಬೆಸ್ಕಾಂನಿಂದ ಬಿಲ್ ದರ ಹೆಚ್ಚಳ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಿಂದ ವಿದ್ಯುತ್ ದರವನ್ನು ಕೂಡ ಏರಿಕೆ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಬೆಸ್ಕಾಂ ಡೆಪಾಸಿಟ್ ದರವನ್ನು ಕೂಡಾ ಏರಿಕೆ ಮಾಡುವುದಕ್ಕೆ ಮುಂದಾಗಿದೆ.

ಹೇಳಿಕೆ ಪ್ರತಿ ವರ್ಷದಂತೆ ಈ ವರ್ಷವೂ ಭದ್ರತಾ ಠೇವಣಿಯನ್ನು ಕೂಡ ಬೆಸ್ಕಾಂ ಹೆಚ್ಚಿಸಿದೆ. ಕೆ.ಇ.ಆರ್.ಸಿ ಆದೇಶದಂತೆ ಡೆಪಾಸಿಟ್ ಶುಲ್ಕ ಹೆಚ್ಚಿಸಿ ಹಣ ಪಾವತಿಸುವಂತೆ ಸೂಚನೆ ನೀಡಿದೆ. ಕಳೆದ 12 ತಿಂಗಳ ಒಟ್ಟು ವಿದ್ಯುತ್ ಶುಲ್ಕದ ಮಾಸಿಕ ಸರಾಸರಿ ಪಡೆಯಲಾಗುತ್ತದೆ. ನಂತರ 2 ತಿಂಗಳ ಸರಾಸರಿ ಶುಲ್ಕವನ್ನು ಭದ್ರತಾ ಠೇವಣಿ ರೀತಿಯಲ್ಲಿ ಸಂಗ್ರಹಿಸಲಾಗುತ್ತದೆ. ಅವಧಿ ಮುಗಿಯುವ ಒಳಗೆ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸದಿದ್ದರೆ ಅಂಥವರ ಮನೆಯ ಪವರ್ ಕಟ್ ಮಾಡುವುದಕ್ಕೆ ಬೆಸ್ಕಾಂ ಆದೇಶ ನೀಡಿದೆ.

Edited By : Shivu K
Kshetra Samachara

Kshetra Samachara

09/05/2022 08:00 pm

Cinque Terre

3.17 K

Cinque Terre

0

ಸಂಬಂಧಿತ ಸುದ್ದಿ