ಬೆಂಗಳೂರು: ರವಿವಾರ ಸಂಜೆ ಸುರಿದ ಗಾಳಿಸಹಿತ ಮಳೆಯಿಂದಾಗಿ ರಸ್ತೆಗೆ ಮಾರುತಿ ಶೋರೂಮ್ ಬೃಹದ್ಗಾತ್ರದ ಹೋಲ್ಡಿಂಗ್ ಬೋರ್ಡ್ ಬಿದ್ದ ಪರಿಣಾಮ ಸರ್ಜಾಪುರದ ಯಮರೆ ಗ್ರಾಮ ಪಂಚಾಯಿತಿ ಬಳಿ ಸಂಚಾರ ದಟ್ಟಣೆ ಉಂಟಾಗಿತ್ತು.
ಇಲ್ಲಿನ ಸರ್ಜಾಪುರ ಯಮರೆ ಗ್ರಾಮ ಪಂಚಾಯಿತಿಯ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳು ಬಿದ್ದು ಸರ್ಜಾಪುರ ರಸ್ತೆ ಸಂಪೂರ್ಣ ಬಂದ್ ಆಗಿದೆ. ಇದಕ್ಕೆ ನೇರ ಹೊಣೆ ಯಮರೆ ಪಂಚಾಯಿತಿ ಅಧಿಕಾರಿಗಳು ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಬೋರ್ಡ್ ಹಾಕಿರುವ ಮಾಲೀಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
PublicNext
08/05/2022 10:27 pm