ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಈ‌‌ ರಸ್ತೆಗೆ ಬಂದ್ರೆ 'ಗುಂಡಿಗೆ' ಗಟ್ಟಿಯಿರಲಿ!; ಎಲ್ಲೆಲ್ಲೂ ಹೊಂಡಾಗುಂಡಿ ಹಾವಳಿ

ಬೆಂಗಳೂರು: ಮಳೆ ಬಂತದ್ರೆ ಸಾಕು, ಈ ರಸ್ತೆ ಪೂರ್ತಿಯೂ ನೀರಿನಿಂದ ತುಂಬಿ ಹೋಗುತ್ತೆ. ಇನ್ನು, ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು. ಸ್ವಲ್ಪ ಯಾಮಾರಿ ಈ ರಸ್ತೆ ಕಡೆ ಬಂದ್ರೆ, ಗುಂಡಿಗಳೇ ನಿಮ್ಮನ್ನು ವೆಲ್ ಕಮ್ ಮಾಡ್ತವೆ!

ಹೌದು. ರಸ್ತೆಯುದ್ದಕ್ಕೂ ಗುಂಡಿಗಳು, ಒಂದು ವಾಹನ ಮುಂದೆ ಹೋಗ್ತಿದ್ರೆ, ದ್ವಿಚಕ್ರ ವಾಹನಗಳಿಗೆ ಆ ಗುಂಡಿಗಳು ಕಾಣದೆ ಈ ಗುಂಡಿಗಳಿಗೇ ಬೀಳುತ್ತಿದ್ದಾರೆ. ಸತತ 3-4 ಕಿ.ಮೀ. ವರೆಗೆ ಇದೇ ರೀತಿ ಇದೆ ಈ ರಸ್ತೆ!

ಅಂದಹಾಗೆ ಇದು ಉತ್ತರಳ್ಳಿ ಮೈನ್ ರಸ್ತೆಯ ದುರವಸ್ಥೆ. ಈ ರಸ್ತೆಯಲ್ಲಿ‌ ಸಂಚರಿಸುವ ವಾಹನ ಸವಾರರು, ಪ್ರಯಾಣಿಕರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಂಡು ವೋಟ್ ಹಾಕಿಸಿಕೊಂಡು, ಗೆದ್ದ ಬಳಿಕ ನನಗೂ ಈ ಕ್ಷೇತ್ರಕ್ಕೂ ಸಂಬಂಧವೇ ಇಲ್ಲ ಅಂತ ಕುಳಿತಿರುವ ಜನಪ್ರತಿನಿಧಿಗಳೇ ಎಲ್ಲಿದ್ದೀರಾ?

ಈಗಾಗ್ಲೇ ಯಾವ ಸರ್ಕಾರನೂ ಬೇಡ ಅಂತ ಜನ ತಲೆಕೆಡಿಸಿಕೊಂಡಿದ್ದಾರೆ. ಸಾರ್ವಜನಿಕರು ಇಂತದ್ದನ್ನೆಲ್ಲ ಖಂಡಿಸಿ ಬೀದಿಗಿಳಿಯುವ ಮುಂಚೆ ಅಧಿಕಾರಿಗಳಾದರೂ ಎಚ್ಚೆತ್ತು ಈ ಕಾಮಗಾರಿ ನಡೆಸಬೇಕಿದೆ.

- ರಂಜಿತಾ ಸುನಿಲ್ 'ಪಬ್ಲಿಕ್ ನೆಕ್ಸ್ಟ್' ಬೆಂಗಳೂರು

Edited By : Nagesh Gaonkar
PublicNext

PublicNext

17/04/2022 08:05 pm

Cinque Terre

80.36 K

Cinque Terre

1

ಸಂಬಂಧಿತ ಸುದ್ದಿ