ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಗುಜರಿ ಕಾಯ್ದೆ ರದ್ದಾಗಲಿ, ಇಲ್ಲದಿದ್ದರೆ ಮೇ 10ರಂದು ಲಾರಿ ಮುಷ್ಕರ"

ಬೆಂಗಳೂರು: 15 ವರ್ಷಗಳ ವಾಹನಗಳನ್ನೂ ಗುಜರಿಗೆ ಹಾಕಬೇಕು ಅಥವಾ ಗ್ರೀನ್ ಟ್ಯಾಕ್ಸ್ ಯೋಜನೆಯಡಿ 15 ವರ್ಷ ತುಂಬಿರುವ ವಾಹನಗಳು 14 ಸಾವಿರ ರೂ. ಕಟ್ಟಬೇಕು, ಲೆಸೆನ್ಸ್ ರಿನೀವಲ್ ಮಾಡಿಕೊಳ್ಳಬೇಕು ಎಂಬ ನಿಯಮವನ್ನು ಸರ್ಕಾರ ಜಾರಿ ಮಾಡುತ್ತಿದೆ. ಆದ್ರೆ, ಈ ʼಗುಜರಿʼ ಕಾಯ್ದೆಯನ್ನು ಖಂಡಿಸಿದ ಫೆಡರೇಶನ್ ಆಫ್ ಕರ್ನಾಟಕ ಲಾರಿ ಮಾಲೀಕರು ಮೇ 10ರಂದು ಮುಷ್ಕರಕ್ಕೆ ಕರೆ ಕೊಡುವುದಾಗಿ ತಿಳಿಸಿದ್ದಾರೆ.

30 ದಿನಗಳ ಒಳಗೆ ಗುಜರಿ / ಗ್ರೀನ್ ಟ್ಯಾಕ್ಸ್ ನಿಯಮವನ್ನು ಹಿಂಪಡೆಯದಿದ್ದರೆ ಮುಷ್ಕರ ಹೂಡುವುದಾಗಿ ಪ್ರೆಸ್ ಮೀಟ್ ಮಾಡಲಾಗಿದೆ. ಇದಕ್ಕೆ ಹಲವಾರು ಸಾರಿಗೆ ಸಂಸ್ಥೆಗಳು ಸಾಥ್ ನೀಡಲಿವೆ. ಜತೆಗೆ ಇನ್ನೂ ಹಲವಾರು ಬೇಡಿಕೆಗಳನ್ನು ಇಟ್ಟಿದ್ದಾರೆ. ಮೊದಲಿಗೆ ಡೀಸೆಲ್ ಮೇಲಿರುವ ಟ್ಯಾಕ್ಸ್ ಹೆಚ್ಚಳ ಮಾಡ್ತಿರುವುದನ್ನು ನಿಲ್ಲಿಸಬೇಕು.

ಗಾಡಿಗಳ ತಪಾಸಣೆ ಮಾಡ್ತೇವೆ ಎಂದು ಅಧಿಕಾರಿಗಳು ವಾಹನ ಸವಾರರಿಗೆ ಹಿಂಸೆ ನೀಡುತ್ತಿದ್ದಾರೆ. ಹೀಗಾಗಿ ಬಾರ್ಡರ್ ಚೆಕ್ ಪೋಸ್ಟ್ ರದ್ದುಗೊಳಿಸಬೇಕು. ಆಗ ಭ್ರಷ್ಟಾಚಾರ ಹಿಡಿತಕ್ಕೆ ಬರುತ್ತೆ. ಇನ್ನು, ಮರಳನ್ನು ಸಾಗಿಸೋದಕ್ಕೆ ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

10/04/2022 04:21 pm

Cinque Terre

9.26 K

Cinque Terre

0

ಸಂಬಂಧಿತ ಸುದ್ದಿ