ಬೆಂಗಳೂರು: ಹೆಚ್ಚುತ್ತಿರುವ ರಸ್ತೆ ಅಪಘಾತಗಳು ನಿರಂತರ ಬೆನ್ನು ನೋವಿನಿಂದ ದೇವರಚಿಕ್ಕನ ಹಳ್ಳಿಯ ನಿವಾಸಿಗಳು ಸುಸ್ತಾಗಿದ್ದಾರೆ.
ದೇವರಚಿಕ್ಕನ ಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯ ನಿವಾಸಿಗಳು ಸರಿಯಾದ ರಸ್ತೆ ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಹೊಂಡಗಳಿಂದ ಕೂಡಿದ ರಸ್ತೆ, ಕಸದ ಸಮಸ್ಯೆ, ಬೀದಿ ನಾಯಿಗಳ ಹಾವಳಿಯಿಂದ ಇಲ್ಲಿನ ನಿವಾಸಿಗಳು ತೀರ ತೊಂದರೆ ಅನುಭವಿಸುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
Kshetra Samachara
24/03/2022 08:12 pm