ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅವ್ಯವಸ್ಥೆಯ ಆಗರವಾಗಿದೆ ಸಿಲ್ವರ್ ಜುಬಿಲಿ ಉದ್ಯಾನ

ನಿತ್ಯದ ಒತ್ತಡದ ಬದುಕಿಗೆ ಸಂತೋಷ, ಸಮಾಧಾನ ನೀಡುವ ತಾಣವಾಗಿದ್ದ ಶ್ರೀ ಕೃಷ್ಣ ರಾಜೇಂದ್ರ ಸಿಲ್ವರ್ ಜುಬಿಲಿ ಪಾರ್ಕ್ ಈಗ ಸರಿಯಾದ ನಿರ್ವಹಣೆ ಇಲ್ಲದೇ ಅವ್ಯವಸ್ಥೆಯ ಆಗರವಾಗಿದೆ.

ಪಾರ್ಕ್‌ನ ನಿರ್ವಹಣೆ ಹೊಣೆ ಹೊತ್ತಿರುವ ಬಿಬಿಎಂಪಿ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಪ್ರಾರಂಭದಲ್ಲಿ ಕೆಲವಷ್ಟು ಅಭಿವೃದ್ಧಿ ಮಾಡಿ ನಗರದ ಜನರನ್ನು ಪಾರ್ಕ್‌ನತ್ತ ಸೆಳೆಯುವಲ್ಲಿ ಯಶಸ್ವಿಯೂ ಆಗಿತ್ತು. ಆದರೆ, ಇದು ಬಹುಕಾಲ ಉಳಿಯದೇ ಮತ್ತೆ ಹಳೆ ಸ್ಥಿತಿಗೆ ಪಾರ್ಕ್‌ ಮರಳಿದಂತಾಗಿದೆ.

ಪಾರ್ಕ್‌ ನಿರ್ವಹಣೆ ಹೊಣೆ ಹೊತ್ತಿರುವ ಪಾಲಿಕೆ ಸಮರ್ಪಕವಾಗಿ ನಿರ್ವಹಿಸುವಲ್ಲಿ ಸೋತಿದೆ. ಪಾರ್ಕ್‌ ಒಳಗಿರುವ ಮಕ್ಕಳ ಆಟಿಕೆಗಳಲ್ಲಿ ತೂತುಬಿದ್ದಿದ್ದು, ಅವಕ್ಕೆ ತೇಪೆ ಹಾಕುವ ಕೆಲಸ ಮಾಡಲಾಗಿದೆ. ಕಾರಂಜಿ, ಕುಳಿತುಕೊಳ್ಳುವ ಆಸನ ನಿರ್ವಹಣೆಯಿಂದ ದೂರವೇ ಉಳಿದಿವೆ.

ಅದರಲ್ಲೂ ಈ ಪಾರ್ಕ್ ಭಿಕ್ಷುಕರ ಆಶ್ರಯ ತಾಣವಾಗಿದೆ. ನೀರನ್ನು ಹಾಕದೆ ಮರಗಳು ಸೊರಗಿವೆ. ಇತ್ತ ಯಾಕಾದ್ರೂ ಬರಬೇಕಪ್ಪ ಅಂತಾ ಜನ ಬೈದುಕೊಳ್ಳುವಂತಿದೆ ಈ ಉದ್ಯಾನ.

Edited By :
Kshetra Samachara

Kshetra Samachara

06/03/2022 07:41 pm

Cinque Terre

2.04 K

Cinque Terre

0

ಸಂಬಂಧಿತ ಸುದ್ದಿ