ಆನೇಕಲ್: ಕಾರ್ಮಿಕರಿಗೆ ಸರಿಯಾದ ವೇತನ ನೀಡದೆ ಮತ್ತು ಮೂಲ ಸೌಕರ್ಯ ಒದಗಿಸದೆ ಗುಲಾಮರಂತೆ ಕೆಲಸ ಮಾಡಿಸಿಕೊಳ್ಳುತ್ತಿರುವ ಈಸ್ಟರ್ನ್ ಸಿಲ್ಕ್ ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ನೌಕರರು ಹಾಗೂ ಕರ್ನಾಟಕ ರಿಪಬ್ಲಿಕ್ ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.
ಆನೇಕಲ್ ಹಾಗೂ ಚಂದಾಪುರ ರಸ್ತೆ ಬಳಿಯಿರುವ ಈಸ್ಟರ್ನ್ ಸಿಲ್ಕ್ ನಲ್ಲಿ ಬಡಪಾಯಿಗಳು ಹಲವು ವರ್ಷಗಳಿಂದಲೂ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಸೂಕ್ತ ವೇತನವನ್ನೇ ಆಡಳಿತ ಮಂಡಳಿ ನೀಡದೆ ಸತಾಯಿಸುತ್ತಿದೆ. ಸಾಲದ್ದಕ್ಕೆ ಗುಲಾಮರಂತೆಯೇ ಕೆಲಸ ಮಾಡಿಸಿಕೊಳ್ಳುತ್ತಿದೆ.
ಇನ್ನು, ರಜೆ ದಿನಗಳಲ್ಲಿ ಮಹಿಳೆಯರನ್ನು ಶೌಚಾಲಯ ಕ್ಲೀನಿಂಗ್ ಹಾಗೂ ಮನೆಯ ಬಟ್ಟೆ ಒಗೆಯುವ ಕೆಲಸವನ್ನೂ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಅದಲ್ಲದೆ, ಅನೇಕ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರೂ ಇನ್ನು ಖಾಯಂ ಮಾಡಿಲ್ಲ ಎಂದು ನೌಕರರು ತಮ್ಮ ಅಳಲನ್ನು ತೋಡಿಕೊಂಡರು. ಈಸ್ಟರ್ನ್ ಸಿಲ್ಕ್ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಿಪಬ್ಲಿಕ್ ಸೇನೆ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
Kshetra Samachara
29/01/2022 07:23 am