ದೇವನಹಳ್ಳಿ: ಸರ್ಕಾರಿ ಜಮೀನಿನಲ್ಲಿ ಕಡ್ಡಿ,ಸೀರೆಗಳಿಂದ ನಿರ್ಮಾಣವಾಗಿರೋ ಗುಡಿಸಲು. ಇದೇ ಗುಡಿಸಲುಗಳ ಮುಂದೆ ಬೇಕೆಬೇಕು ನಿವೇಶನಬೇಕು ಎಂದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತಿರುವ ನಿರ್ಗತಿಕ ಕುಟುಂಬ. ನಮಗೆ ಸೈಟ್ ನೀಡೊಕೆ ಅಡ್ಡ ಬರ್ತಿರೋರು ಹಾಳಾಗಿ ಹೋಗಲಿ ಎಂದು ಶಾಪ ಹಾಕ್ತಿರೋ ಮಹಿಳೆಯರು.
ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಬೆಂಗಳೂರು ಗ್ರಾ. ದೇವನಹಳ್ಳಿ ತಾಲೂಕಿನ ಅರದೇಶನಹಳ್ಳಿ ಗ್ರಾಮದಲ್ಲಿ. ಅಂದ ಹಾಗೆ ಈ ಗ್ರಾಮದಲ್ಲಿ ಅನೇಕ ವರ್ಷಗಳಿಂದ 30 ಕ್ಕೂ ಹೆಚ್ಚು ದಲಿತ ನಿರ್ಗತಿಕ ಕುಟುಂಬ ಸಣ್ಣ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ.
ಇನ್ನೂ ಇಲ್ಲಿ ವಾಸ ಮಾಡುತ್ತಿರುವ ಮನೆಗಳು ಬಿದ್ದು ಹೋಗಿದ್ದು, ಕೂಲಿ ಮಾಡಿಕೊಂಡು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಇವರು ನಿವೇಶನ ನೀಡಿ ಸ್ವಾಮಿ ಎಂದು ಜಿಲ್ಲಾಡಳಿತಕ್ಕೆ ಮನವಿ ಕೂಡ ಮಾಡಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳು ಗ್ರಾಮದ ಸರ್ಕಾರಿ ಜಾಗದಲ್ಲಿ ಸೈಟ್ ನೀಡಿ ಅಂತಾ ಗುಡಿಸಲು ನಿರ್ಮಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.
ಅಂದಹಾಗೆ ಗ್ರಾಮದ ಸರ್ವೆ.ನಂ 69ರಲ್ಲಿ 38ಗುಂಟೆ ಸರ್ಕಾರಿ ಜಾಗ ಬಿಟ್ಟು ಬೇರೆ ಯಾವ ಜಾಗವೂ ಸರ್ಕಾರಿ ಭೂಮಿ ಇಲ್ಲವಂತೆ. ಇದೇ ಸರ್ಕಾರಿ ಭೂಮಿನ ನಿರ್ಗತಿಕರಿಗೆ ಸೈಟ್ ನೀಡಿ ಅಂತಾ ಎರಡು ಭಾರಿ ಪ್ರತಿಭಟನೆ ಮಾಡಿದ್ದಾರೆ. ಆದ್ರೆ ಜನಪ್ರತಿನಿಧಿಗಳು ಅಧಿಕಾರಿಗಳು ಊರಲ್ಲಿ ಸ್ಮಶಾನವಿದ್ದರು ಸ್ಮಶಾಣಕ್ಕೆ ಜಾಗ ಅಂತಾ 38 ಗುಂಟೆ ಮಂಜೂರು ಮಾಡಲು ಹೊರಟಿದ್ದಾರಂತೆ.
ಇದ್ರಿಂದ ರೊಚ್ಚಿಗೆದ್ದಿರುವ ನಿರ್ಗತಿಕ ಕುಟುಂಬಗಳು ಈ ಜಾಗಕ್ಕೆ ಆಗಮಿಸಿ ಕಡ್ಡಿಗಳಿಂದ ಗುಡಿಸಲು ನಿರ್ಮಿಸಿ ಸೈಟ್ ಗಾಗಿ ಹೋರಾಟ ನಡೆಸುತ್ತಿದ್ದಾರೆ.
Kshetra Samachara
27/01/2022 02:08 pm