ದೊಡ್ಡಬಳ್ಳಾಪುರ: ವೈಜ್ಞಾನಿಕವಾಗಿ ಘನತ್ಯಾಜ್ಯ ನಿರ್ವಹಣೆಯಲ್ಲಿ ದೊಡ್ಡಬಳ್ಳಾಪುರ ನಗರಸಭೆ ಉತ್ತಮ ಸಾಧನೆ ಮಾಡಿದೆ. ಪ್ರತಿ ದಿನ 35 ಟನ್ ಘನ ತ್ಯಾಜ್ಯ ಸಂಗ್ರಹಿಸುವ ನಗರಸಭೆ, ಕಸ ಗೊಬ್ಬರವಾಗಿಸಿ ಆದಾಯ ಗಳಿಸುತ್ತಿದ್ದು, ಸ್ವಚ್ಚ ನಗರಗಳ ಪಟ್ಟಿಯಲ್ಲಿ 4ನೇ ಸ್ಥಾನ, ದಕ್ಷಿಣ ಭಾರತ ವಲಯದಲ್ಲಿ 43ನೇ ಸ್ಥಾನ ತನ್ನದಾಗಿಸಿದೆ.
ಇಲ್ಲಿ ಪ್ರತಿದಿನ 35 ಟನ್ ಕಸ ಉತ್ಪತ್ತಿಯಾಗುತ್ತೆ. 31ನೇ ವಾರ್ಡ್ ನಿಂದ ಕಸ ಸಂಗ್ರಹಕ್ಕೆ 100ಕ್ಕೂ ಹೆಚ್ಚು ಸಿಬ್ಬಂದಿ, 25 ವಾಹನಗಳಿದ್ದು, ವಾರ್ಡ್ ಸಂಗ್ರಹಿತ ಕಸವನ್ನು ವಡ್ಡರಪಾಳ್ಯದ ಘನ ತ್ಯಾಜ್ಯ ಘಟಕಕ್ಕೆ ತಂದು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ.
15 ಟನ್ ಸಂಗ್ರಹಿತ ಹಸಿ ಕಸವನ್ನು 40 ದಿನ ಕೊಳೆಸಿ ಸಾವಯವ ಗೊಬ್ಬರವಾಗಿಸಲಾಗುವುದು. 10 ಟನ್ ಒಣಕಸದಲ್ಲಿ 5 ಟನ್ ಪ್ಲಾಸ್ಟಿಕ್, 5 ಟನ್ ಮರುಬಳಕೆಗೆ ಬಾರದ ವಸ್ತು ಸಂಗ್ರಹವಾಗುತ್ತೆ. ಪ್ಲಾಸ್ಟಿಕ್ ವಸ್ತು ಹರಾಜಿಗಿರಿಸಿ ಆದಾಯ, ಮರುಬಳಕೆಗೆ ಬಾರದ್ದನ್ನು ವೈಜ್ಞಾನಿಕವಾಗಿ ಸುಟ್ಟು ವಿಲೇವಾರಿ ಮಾಡಲಾಗುತ್ತದೆ. ಕಸದಿಂದ ಕಾಂಪೋಸ್ಟ್, ಎರೆಹುಳು ಗೊಬ್ಬರ ತಯಾರಿಸಿ ರೈತರಿಗೆ ಮಾರಾಟ ಮಾಡಲಾಗುತ್ತದೆ. ಈಗಾಗಲೇ 1900 ಟನ್ ಗೊಬ್ಬರ ಮಾರಾಟ ಮಾಡಿ ಆದಾಯ ಗಳಿಸಿದೆ. ನಗರವನ್ನು ಇನ್ನೂ ಸ್ವಚ್ಛವಾಗಿಡಲು ಪಣತೊಟ್ಟಿರುವ ನಗರಸಭೆ ಅಧ್ಯಕ್ಷರು, ಸದಸ್ಯರು ಸ್ವಚ್ಛತಾ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಪ್ರಯತ್ನದಲ್ಲಿದ್ದಾರೆ.
PublicNext
16/01/2022 05:56 pm