ಬೆಂಗಳೂರು: ನಮ್ಮ ಮೆಟ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, 280 ಮೀಟರ್ ಉದ್ದದ ಗಟ್ಟಿ ಬಂಡೆಯನ್ನು ಕೊರೆದು ಅವನಿ ಯಂತ್ರ ಹೊರ ಬಂದಿದೆ.
ಯಂತ್ರವಮಿಕ ಹೆಸರಿನ ಸುರಂಗ ಕೊರೆಯುವ ಸ್ಲರಿ ಆಧಾರಿತ ಯಂತ್ರವು 2021ರ ಜೂನ್ 29 ರಂದು ದಕ್ಷಿಣ ರಾಂಪ್‌ನಲ್ಲಿ (ಡೈರಿ ಸರ್ಕಲ್) ಸುರಂಗ ಕೊರೆಯಲು ಪ್ರಾರಂಭಿಸಿತು. 614 ಮೀಟರ್ ಸುರಂಗ ಕೊರೆಯುವುದನ್ನು ಪೂರ್ಣಗೊಳಿಸಿ, ಜನವರಿ 3 ರಂದು ಡೈರಿ ಸರ್ಕಲ್ ಮೆಟ್ರೋ ನಿಲ್ದಾಣವನ್ನು ತಲುಪಿತ್ತು. ಈ ಯಂತ್ರವು ಸದ್ಯಕ್ಕೆ ಡೈರಿ ಸರ್ಕಲ್ ನಿಲ್ದಾಣದಲ್ಲಿ ಚಲಿಸುತ್ತಿದ್ದು, ಡೈರಿ ಸರ್ಕಲ್ ಮತ್ತು ಲಕ್ಕಸಂದ್ರ ಮೆಟ್ರೋ ನಿಲ್ದಾಣಗಳ ನಡುವಿನ ಸುರಂಗ ಕೊರೆಯುವ ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿದೆ.
ಕಳೆದ 2020ರ ಸೆಪ್ಟೆಂಬರ್ 05ರಂದು ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಸುರಂಗ ಕೊರೆಯಲು ಪ್ರಾರಂಭಿಸಲಾಯಿತು. ಅವನಿ ಸುರಂಗ ಕೊರೆಯುವ ಸ್ಲರಿ ಆಧಾರಿತ ಯಂತ್ರವು 1086 ಮೀಟರ್‌ಗಳ ಸುರಂಗ ಕೊರೆಯುವ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಎಂ.ಜಿ ರಸ್ತೆ ನಿಲ್ದಾಣದಲ್ಲಿ ಇಂದು ಹೊರ ಬಂದಿದೆ. ಟಿ.ಬಿ.ಎಂ. ಅವನಿ ಸುಮಾರು 280 ಮೀಟರ್ ಉದ್ದದ ಗಟ್ಟಿ, ಬಂಡೆಯನ್ನು ಕೊರೆದು ಹೊರಬಂದಿದೆ.
ಇದರಲ್ಲಿ ಸುರಂಗ ಮಾರ್ಗವು ಅತ್ಯಂತ ಸವಾಲಿನದಾಗಿತ್ತು. ಈ ಟಿ.ಬಿ.ಎಂ ನಿಲ್ದಾಣ ಪ್ರದೇಶದ ಮೂಲಕ ಎಂ.ಜಿ. ರಸ್ತೆಯಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಿಲ್ದಾಣಗಳ ನಡುವೆ ಮತ್ತಷ್ಟು ಸುರಂಗ ಮಾರ್ಗಕ್ಕಾಗಿ ಅವನಿ ಚಲಿಸಲಿದೆ.
Kshetra Samachara
06/01/2022 08:58 pm