ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೇಟ್‌ ವೇ ಆಫ್ ಬೆಂಗಳೂರಿನ ಫ್ಲೈ‌ಓವರ್‌ನಲ್ಲಿ ತಾಂತ್ರಿಕ ದೋಷ; ಒಂದು ವಾರ ಸಂಚಾರ ಬಂದ್

ನೆಲಮಂಗಲ: ಹೀಗೆ ಬಂದ್ ಆಗಿರೋ ಫ್ಲೈಓವರ್, ಮತ್ತೊಂದೆಡೆ ಮುಂದೆ ಸಾಗಲಾಗದೆ ಟ್ರಾಫಿಕ್‌ ನಲ್ಲಿ ಸಿಲುಕಿರೋ ಆಂಬ್ಯುಲೆನ್ಸ್‌ಗಳು, ಇದೇನಾಯ್ತಪ್ಪ ಅಂತ ನಿಧಾನಗತಿಯಲ್ಲಿ ಸಾಗ್ತಿರೋ ವಾಹನಗಳು, ಇನ್ನೊಂದೆಡೆ ಟ್ರಾಫಿಕ್ ನಿಯಂತ್ರಿಸಲು ಹರಸಾಹಸ ಪಡ್ತಿರೋ ಸಂಚಾರಿ ಪೊಲೀಸ್ರು ... ಹೌದು. ಈ ಸಮಸ್ಯೆಗೆ ಕಾರಣವಾಗಿದ್ದು ಗೇಟ್‌ವೇ ಆಫ್ ಬೆಂಗಳೂರಿನ ಫ್ಲೈ‌ಓವರ್‌ ರೋಪ್‌ನಲ್ಲಿ ಕಾಣಿಸಿದ ದೋಷ.

ನೆಲಮಂಗಲದಿಂದ ಗೊರಗುಂಟೆಪಾಳ್ಯಕ್ಕೆ ಸಂಪರ್ಕಿಸೋ ರಾ.ಹೆ. 48 ತುಮಕೂರು-ಬೆಂಗಳೂರು ಫ್ಲೈ‌ಓವರ್‌ 10 ವರ್ಷಗಳ ಹಿಂದೆ ಇಂಟರ್‌ಲಾಕಿಂಗ್ ಸಿಸ್ಟಮ್ ಬಳಸಿ ಮೇಲ್ಸೇತುವೆ ನಿರ್ಮಿಸಲಾಗಿತ್ತು. ನಿರ್ಮಾಣ ವೇಳೆ ಒಂದು ಪಿಲ್ಲರ್‌ನಿಂದ ಮತ್ತೊಂದು ಪಿಲ್ಲರ್ ನಡುವಿನ ಸ್ಲಾಬ್‌ ಬಿಗಿಗೊಳಿಸಲು ಅಳವಡಿಸಿದ್ದ ರೋಪ್ ಅಂದ್ರೆ ಕಬ್ಬಿಣದ ವೈರ್‌ಗಳಲ್ಲಿ ಒಂದು ವೈರ್ ಸಡಿಲವಾಗಿದ್ರಿಂದ ತಾತ್ಕಾಲಿಕವಾಗಿ 2 ಫ್ಲೈ‌ಓವರ್ ಸಂಚಾರ ನಿಷೇಧಿಸಲಾಗಿದೆ.

ಕಾರ್ಯ ನಿರ್ವಹಣೆ ವೇಳೆ ಬೆಳಕಿಗೆ ಬಂದ ನಂತರ ಎಚ್ಚೆತ್ತ NHAI ಅಧಿಕಾರಿಗಳು ಫ್ಲೈಓವರ್ ಸಂಚಾರ ನಿರ್ಬಂಧಿಸಿದ ಹಿನ್ನೆಲೆ ಪೀಣ್ಯ ಪೊಲೀಸ್ರು ರಸ್ತೆ ಡೈವರ್ಟ್ ಮಾಡಿದ್ರು. ಫ್ಲೈ‌ಓವರ್‌ನಲ್ಲಿ 116 ಪಿಲ್ಲರ್‌ಗಳಿದ್ದು, 101 ಮತ್ತು 102 ನೇ ಪಿಲ್ಲರ್ ನಡುವಿನ ಸ್ಲಾಬ್‌ನಲ್ಲಿ ಸೆಗ್ಮೆಂಟ್ ಜಾಯಿಂಟ್ ಸಮಸ್ಯೆ ಕಾಣಿಸಿತ್ತು. ಫ್ಲೈ‌ಓವರ್‌ನಲ್ಲಿ 16 ರೋಪ್‌ ಅಳವಡಿಸಿದ್ದು, ಒಂದು ರೋಪ್‌ನ ಸೆಗ್ಮೆಂಟ್ ಜಾಯಿಂಟ್ ಮಾತ್ರ ಸಮಸ್ಯೆಯಾಗಿದೆ.

ನಾಳೆ ರಾ.ಹೆ. ತಾಂತ್ರಿಕ ಸಿಬ್ಬಂದಿ ಬರಲಿದ್ದು, ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು. ಅಲ್ಲಿವರೆಗೂ ಫ್ಲೈ ಓವರ್ ಬಂದ್ ಮಾಡಲಾಗುವುದು, ಸಾರ್ವಜನಿಕರು ಸಹಕರಿಸಿ ಎಂದು ಹೆದ್ದಾರಿ ಪ್ರಾಧಿಕಾರ ತಾಂತ್ರಿಕ ಮುಖ್ಯಸ್ಥ ತಿಳಿಸಿದ್ದಾರೆ. ಒಟ್ಟಾರೆ ಒಂದು ವಾರ ಬೆಂಗಳೂರಿಗೆ ಬರೋ ಹೆದ್ದಾರಿ ಫ್ಲೈ‌ಓವರ್ ಬಂದಾಗಲಿದ್ದು, ವಾಹನಗಳು ಸಂಚಾರ ದಟ್ಟಣೆ ಮಧ್ಯೆಯೇ ಸಾಗಬೇಕಿದೆ. ಮಂಗಳೂರು, ತುಮಕೂರು ಕಡೆಯಿಂದ ಬೆಂಗಳೂರಿಗೆ ಬರುವ ವಾಹನಗಳು ನೈಸ್ ರಸ್ತೆ ಮತ್ತು ಮಾಗಡಿ ರಸ್ತೆ ಬದಲಿ ಮಾರ್ಗವಾಗಿ ಬೆಂಗಳೂರು ತಲುಪೋದು ಅನಿವಾರ್ಯವಾಗಿದೆ.

Edited By : Nagesh Gaonkar
PublicNext

PublicNext

25/12/2021 09:46 pm

Cinque Terre

33.98 K

Cinque Terre

1

ಸಂಬಂಧಿತ ಸುದ್ದಿ