ಬೆಂಗಳೂರು : ಸದಾ ವಾಹನ ಗಳಿಂದ ಗಿಜಿಗುಡುವ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರ ಮುಂಭಾಗ ದಲ್ಲಿ ನಿನ್ನೆ ಡಿ.16 ರಂದು
8 ಅಡಿ ಆಳವಾದ ರಸ್ತೆ ಗುಂಡಿ ಬಾಯಿ ತೆರೆದು ಕೊಂಡಿತ್ತು. ಬೆಳಗ್ಗೆ 9 ಗಂಟೆ ಸುಮಾರಿಗೆ ಹೊಂಡವಾದ ರಸ್ತೆಯಿಂದ ಸಂಜೆ ಯವರೆಗೂ ಸುತ್ತಮುತ್ತಲಿನ ರಸ್ತೆಗಳು ಸಂಚಾರ ದಟ್ಟಣೆಯಿಂದ ಕೂಡಿದ್ದವು.
ನೆಲದಡಿಯಲ್ಲಿ ಹಾದು ಹೋಗಿರುವ ಜಲಮಂಡಳಿಯ ಕೊಳವೆಯಿಂದ ಸೋರಿಕೆಯಾಗುತ್ತಿದ್ದ ನೀರಿನಿಂದ ಮಣ್ಣು ಸಡಿಲಗೊಂಡು ರಸ್ತೆ ಮಧ್ಯೆ ಗುಂಡಿ ಆಗಿದೆ. ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದರು. ಬಳಿಕ ಮಣ್ಣು ಹೊರ ತೆಗೆದು ಜೆಲ್ಲಿ ಪುಡಿ, ವೆಟ್‌ಮಿಕ್ಸ್, ಗುಂಡಿಯಲ್ಲಿ ತುಂಬಲಾಯಿತು.
Kshetra Samachara
17/12/2021 09:20 am