ವರದಿ: ಗಣೇಶ್ ಹೆಗಡೆ
ಬೆಂಗಳೂರು: ಒಂದು ವರ್ಷದಲ್ಲಿ ಮುಗಿಯಬೇಕಿದ್ದ ಉಕ್ಕಿನ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರು ನಾಲ್ಕೂವರೆ ವರ್ಷ ತೆಗೆದುಕೊಂಡಿದ್ದಾರೆ.
ಬೆಂಗಳೂರು ಮೊದಲ ಉಕ್ಕಿನ ಸೇತುವೆ ಶಿವಾನಂದ ವೃತ್ತದ ಬಳಿ ನಿರ್ಮಾಣವಾಗುತ್ತಿದೆ. 2017ರ ಜೂನ್‌ನಲ್ಲಿ ಎಂ.ವೆಂಕಟರಾವ್ ಇನ್ ಫ್ರಾ ಪ್ರಾಜೆಕ್ಟ್ ಪ್ರೈ.ಲಿ ಕಂಪನಿಗೆ ಕಾಮಗಾರಿ ಗುತ್ತಿಗೆ ಬಿಬಿಎಂಪಿ ನೀಡಿತ್ತು. 2018ರ ಜುಲೈ ತಿಂಗಳಲ್ಲಿ ಪೂರ್ಣವಾಗಬೇಕಿದ್ದ ಕಾಮಗಾರಿ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.
ಯೋಜನೆ ಆರಂಭವಾದ ಬಳಿಕ ರಸ್ತೆ ಬದಿಯ ಮರಗಳ ನೆಲಕ್ಕೆ ಉರುಳಿಸಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿನ ವರ್ತಕರು, ಪರಿಸರವಾದಿಗರು ವಿರೋಧ ವ್ಯಕ್ತಪಡಿಸಿದ್ದರು. ಪ್ರಕರಣ 3 ತಿಂಗಳ ಕಾಲ ಕೋರ್ಟ್‌ನಲ್ಲಿದ್ದ ಪರಿಣಾಮ ಕಾಮಗಾರಿ 2018ರಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಅಡ್ಡಿಯಾಗಿತ್ತು. ಹೊರತಾಗಿ ಯಾವುದೇ ಅಡ್ಡಿ ಎದುರಾಗಿಲ್ಲ.
ಸ್ಟೀಲ್ ಬ್ರಿಡ್ಜ್ ಕಾಮಗಾರಿ ವಿಳಂಬದಿಂದ ಮತ್ತಷ್ಟು ಟ್ರಾಫಿಕ್ ಜಾಮ್ ಆಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಗುತ್ತಿಗೆದಾರರು 20 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
Kshetra Samachara
12/12/2021 11:42 am