ಬೆಂಗಳೂರು: ಕುಪ್ಪಂ ರೈಲು ನಿಲ್ದಾಣ ಯಾರ್ಡ್ನಲ್ಲಿ ಅಸ್ತಿತ್ವದಲ್ಲಿರುವ ಫುಟ್ ಓವರ್ ಬ್ರಿಡ್ಜ್‌ನ ಬದಲಾಗಿ ಹೊಸ ಫುಟ್ ಓವರ್ ಬ್ರಿಡ್ಜ್ ಅಳವಡಿಕೆ ಕಾರ್ಯ ನಿಮಿತ್ತ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಇರುವ ಕಾರಣ ರೈಲು ಸೇವೆ ಭಾಗಶಃ ರದ್ದಾಗಲಿದೆ.
ಹಾಗೆ ಕೆಲ ರೈಲುಗಳ ಓಡಾಟದಲ್ಲಿ ಬದಲಾವಣೆ ಆಗಲಿದೆ. ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ನ. 30 ರಿಂದ ಡಿ.2ರ ವರೆಗೆ ರೈಲು ಸಂಖ್ಯೆ (06551) ಕೆಎಸ್ಆರ್ ಬೆಂಗಳೂರು - ಜೋಲಾರಪೇಟೆ ವಿಶೇಷ ಮೆಮು ಸೇವೆ ಬಂಗಾರಪೇಟೆ ಹಾಗೂ ಜೋಲಾರಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.
ನವೆಂಬರ್ 30 ರಿಂದ ಡಿ.2ರ ವರೆಗೆ ರೈಲು ಸಂಖ್ಯೆ(06552) ಜೋಲಾರಪೇಟೆ - ಕೆಎಸ್ಆರ್ ಬೆಂಗಳೂರು ವಿಶೇಷ ಮೆಮು ಸೇವೆ ಜೋಲಾರಪೇಟೆ ಹಾಗೂ ಬಂಗಾರಪೇಟೆ ನಡುವೆ ಭಾಗಶಃ ರದ್ದಾಗುವುದು. ರೈಲು ಈ ದಿನಗಳಲ್ಲಿ ಬಂಗಾರಪೇಟೆಯಿಂದ ತನ್ನ ನಿಗದಿತ ಸಮಯಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣದೆಡೆಗೆ ಹೊರಡುವುದು.
Kshetra Samachara
30/11/2021 12:27 pm