ವರದಿ: ಗಣೇಶ್ ಹೆಗಡೆ
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ಇಂದಿನಿಂದ ಮೆಟ್ರೋ ರೈಲು ಸೇವೆಯ ಅವಧಿ ವಿಸ್ತರಿಸಿದೆ. ಆ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ ರೈಲು ಪ್ರಯಾಣಿಕರ ಅನುಕೂಲಕಕ್ಕಾಗಿ ಮೆಟ್ರೋ ನಿಲ್ದಾಣಗಳಿಂದ ಮೆಟ್ರೋ ಫೀಡರ್ ಸಾರಿಗೆ ಬಸ್ ಸೌಲಭ್ಯವನ್ನು ತಡರಾತ್ರಿವರೆಗೂ ಒದಗಿಸಲಿದೆ.
ಬಿಎಂಟಿಸಿಯು ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಮಿತವ್ಯಯ ದರದಲ್ಲಿ ಒದಗಿಸುತ್ತಿದೆ. ಸಂಸ್ಥೆ ವಿವಿಧ ಮಾರ್ಗಗಳಲ್ಲಿ ಪ್ರಯಾಣಿಕರ ಬೇಡಿಕೆ ಅನುಗುಣವಾಗಿ ಸೇವೆ ನೀಡುತ್ತಿದೆ.
ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಹಾಗೂ ಬೇಡಿಕೆ ಪರಿಶೀಲಿಸಿ ಮೆಟ್ರೋ ಫೀಡರ್ ಬಸ್ ಸೇವೆಯನ್ನು ತಡರಾತ್ರಿವರೆಗೂ ಒದಗಿಸಲು ಅಗತ್ಯ ವ್ಯವಸ್ಥೆ ತೆಗೆದು ಕೊಳ್ಳಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.
* ಮಾರ್ಗಗಳ ವಿವರ: ಎಸ್ ವಿ ಮೆಟ್ರೋ ನಿಲ್ದಾಣದಿಂದ ವೈಟ್ ಫೀಲ್ಡ್ ಟಿಟಿಎಂಸಿ ವರೆಗೆ ರಾತ್ರಿ 10.30ರಿಂದ 12.10 ಗಂಟೆ.
- ಎಸ್ ವಿ ಮೆಟ್ರೋ ನಿಲ್ದಾಣದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ರಾತ್ರಿ 10.30- 11.30, 12.10.
-ಎಸ್ ವಿ ಮೆಟ್ರೋ ನಿಲ್ದಾಣದಿಂದ ಕೆ. ಆರ್.ಪುರಂ ರಾತ್ರಿ 12.5 ಗಂಟೆ.
- ವಿಜಯ ನಗರ ಮೆಟ್ರೋ ನಿಲ್ದಾಣದಿಂದ ಅಂಬೇಡ್ಕರ್ ಕಾಲೇಜುವರೆಗೆ ರಾತ್ರಿ 11.50.
- ರಾಜರಾಜೇಶ್ವರಿ ಮೆಟ್ರೋ ನಿಲ್ದಾಣದಿಂದ ಬಿಇಎಂಎಲ್ 5 ನೇ ಹಂತವರೆಗೆ ರಾತ್ರಿ 10.20- 11.01, 12.00 ಗಂಟೆ.
- ಜ್ಞಾನಭಾರತಿ ಮೆಟ್ರೋ ನಿಲ್ದಾಣದಿಂದ ಉಲ್ಲಾಳ ಉಪನಗರದವರೆಗೆ ರಾತ್ರಿ 10.50 - 12.10 ಗಂಟೆ.
- ಜಾಲಹಳ್ಳಿ ಮೆಟ್ರೋ ನಿಲ್ದಾಣ ದಿಂದ ವಿದ್ಯಾರಣ್ಯಪುರದವರೆಗೆ ರಾತ್ರಿ 11.05, 12.10 ಗಂಟೆ.
- ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಪೀಣ್ಯ 2ನೇ ಹಂತದವರೆಗೆ ರಾತ್ರಿ 11- 12.10 .
- ನಾಗಸಂದ್ರ ಮೆಟ್ರೋ ನಿಲ್ದಾಣ ದಿಂದ ಚಿಕ್ಕಬಾಣಾವರದ ವರೆಗೆ ರಾತ್ರಿ 11.01, 12.05 ಗಂಟೆ.
- ಜಯನಗರ ಮೆಟ್ರೋ ನಿಲ್ದಾಣದಿಂದ ಜಂಬೂ ಸವಾರಿ ದಿಣ್ಣೆವರೆಗೆ ರಾತ್ರಿ 10- 11.05, 12.10.
- ರೇಷ್ಮೆ ರಸ್ತೆ ಮೆಟ್ರೋ ನಿಲ್ದಾಣದಿಂದ ಕಗ್ಗಲಿಪುರದವರೆಗೆ ರಾತ್ರಿ 11.01, 12.10 ಗಂಟೆ.
Kshetra Samachara
18/11/2021 08:17 am