ಬೆಂಗಳೂರು: ಕೋವಿಡ್-19 ಕಾರಣದಿಂದಾಗಿ ಬಿಎಂಟಿಸಿ ರಾತ್ರಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು 20 ತಿಂಗಳಿನಿಂದ ರಾತ್ರಿ ಬಿಎಂಟಿಸಿ ಬಸ್ ಸೇವೆ ಲಭ್ಯವಿರಲಿಲ್ಲ. ಇದೀಗ ಕೊರೊನಾ ಸಾಂಕ್ರಾಮಿಕ ಇಳಿಕೆ ಆಗಿರುವ ಸಂದರ್ಭದಲ್ಲಿ ಮತ್ತೆ ಬಿಎಂಟಿಸಿ ರಾತ್ರಿ ಬಸ್ ಸೇವೆಯನ್ನು ಪುನಾರಂಭಿಸಲಾಗಿದೆ.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ವಿಧಿಸಿದ್ದ ರಾತ್ರಿ ಕರ್ಫ್ಯೂ ಆದೇಶ ಹಿಂತೆಗೆದುಕೊಂಡಿತ್ತು. ಹೀಗಾಗಿ ಭಾನುವಾರದಿಂದ ರಾತ್ರಿ ಬಸ್ ಸಂಚಾರ ಮತ್ತೆ ಆರಂಭವಾಗಿದೆ. ದಿನ ನಿತ್ಯ ರಾತ್ರಿ 11:30ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾಜಧಾನಿ ನಗರಿಯಲ್ಲಿ ಬಸ್‌ಗಳ ಸೇವೆ ಲಭ್ಯ ಇದೆ. ಅಂದರೆ ಬಿಎಂಟಿಸಿ ಬಸ್ಸುಗಳು ದಿನವಿಡೀ 24 ಗಂಟೆಯೂ ಪ್ರಯಾಣಿಕರಿಗೆ ಲಭ್ಯ ಇರಲಿವೆ.
ಬಿಎಂಟಿಸಿ ನೈಟ್ ಬಸ್ಸುಗಳ ಸಂಚಾರ (ರಾತ್ರಿ 11:30ರಿಂದ ಬೆಳಗ್ಗೆ 5ರವರೆಗೆ):
ಕ್ರ.ಸಂ. ಮಾರ್ಗ ಸಂಖ್ಯೆ ಎಲ್ಲಿಂದ-ಎಲ್ಲಿಗೆ ಬಸ್‌ಗಳ ಸಂಖ್ಯೆ
1 12 ಮೆಜೆಸ್ಟಿಕ್- ಬನಶಂಕರಿ 1
2 45ಡಿ ಮೆಜೆಸ್ಟಿಕ್- ಎಜಿಎಸ್ ಲೇಔಟ್ 1
3 114ಸಿ ಮೆಜೆಸ್ಟಿಕ್- ಸುಲ್ತಾನ್ ಪಾಳ್ಯ 1
4 210ಎನ್ ಮೆಜೆಸ್ಟಿಕ್- ಉತ್ತರಹಳ್ಳಿ 1
5 215ಎಚ್ ಮೆಜೆಸ್ಟಿಕ್- ಜಂಬೂಸವಾರಿ ದಿಣ್ಣೆ 2
6 215ಎನ್ ಮೆಜೆಸ್ಟಿಕ್- ಅಂಜನಾಪುರ 1
7 222ಎ ಮೆಜೆಸ್ಟಿಕ್- ಕೆಂಗೇರಿ ಸ್ಯಾಟಲೈಟ್ ಟೌನ್ 1
8 223ಡಿ ಕೆಆರ್ ಮಾರುಕಟ್ಟೆ - ದೊಡ್ಡಬಸ್ತಿ 1
9 225ಸಿ ಮೆಜೆಸ್ಟಿಕ್- ಬಿಇಎಂಎಲ್ ಲೇಔಟ್ 5ನೇ ಹಂತ 2
10 226 ಎಂ ಕೆಆರ್ ಮಾರುಕಟ್ಟೆ - ಬಿಡದಿ 1
11 226ಎನ್ ಮೆಜೆಸ್ಟಿಕ್- ಬಿಡದಿ 1
12 238ಯು ಮೆಜೆಸ್ಟಿಕ್- ಬೆಂಗಳೂರು ವಿವಿ 1
13 242 ಕೆಆರ್ ಮಾರುಕಟ್ಟೆ- ತಾವರಕೆರೆ 2
14 242ಬಿ ಮೆಜೆಸ್ಟಿಕ್- ತಾವರಕೆರೆ 2
15 248 ಕೆಆರ್ ಮಾರುಕಟ್ಟೆ- ಜಾಲಹಳ್ಳಿ ಕ್ರಾಸ್ 2
16 250ಎ ಮೆಜೆಸ್ಟಿಕ್- ಚಿಕ್ಕಬಾಣಾವರ 2
17 252 ಮೆಜೆಸ್ಟಿಕ್ ಪೀಣ್ಯ- 2ನೇ ಹಂತ 1
18 252ಇ ಮೆಜೆಸ್ಟಿಕ್- ಲಗ್ಗೆರೆ 1
19 252ಎಫ್ ಮೆಜೆಸ್ಟಿಕ್- ಪೀಣ್ಯ 2ನೇ ಹಂತ 1
20 258ಸಿ ಮೆಜೆಸ್ಟಿಕ್- ನೆಲಮಂಗಲ 3
21 273 ಮೆಜೆಸ್ಟಿಕ್- ಪೀಣ್ಯ 2ನೆ ಹಂತ 1
22 284 ಮೆಜೆಸ್ಟಿಕ್- ಯಲಹಂಕ 1
23 285ಎಂ ಮೆಜೆಸ್ಟಿಕ್- ದೊಡ್ಡಬಳ್ಳಾಪುರ 2
24 290ಬಿ ಮೆಜೆಸ್ಟಿಕ್- ಥಣಿಸಂದ್ರ 1
25 298ಎಂ ಮೆಜೆಸ್ಟಿಕ್- ದೇವನಹಳ್ಳಿ 1
26 342ಎಫ್ ಮೆಜೆಸ್ಟಿಕ್- ಸರ್ಜಾಪುರ 1
27 360ಕೆ ಮೆಜೆಸ್ಟಿಕ್- ಅತ್ತಿಬೆಲೆ 2
28 365 ಮೆಜೆಸ್ಟಿಕ್- ಬನ್ನೇರುಘಟ್ಟ ಮೃಗಾಲಯ 1
29 365ಜೆ ಮೆಜೆಸ್ಟಿಕ್- ಜಿಗಣಿ ಎಪಿಸಿ ಸರ್ಕಲ್ 1
30 365ಪಿ ಮೆಜೆಸ್ಟಿಕ್- ಆನೇಕಲ್ 1
31 375ಡಿ ಕೆಂಗೇರಿ ಟಿಟಿಎಂಸಿ- ಬನಶಂಕರಿ ಟಿಟಿಎಂಸಿ 1
32 378 ಎಲೆಕ್ಟ್ರಾನಿಕ್ ಸಿಟಿ- ಕೆಂಗೇರಿ ಟಿಟಿಎಂಸಿ 1
33 401ಎ ಯಲಹಂಕ- ಪೀಣ್ಯ 2ನೇ ಹಂತ 1
34 401ಕೆ ಯಲಹಂಕ- ಕೆಂಗೇರಿ ಟಿಟಿಎಂಸಿ 1
35 401ಎಂ ಯಶವಂತಪುರ ಟಿಟಿಎಂಸಿ- ಕೆಂಗೇರಿ ಟಿಟಿಎಂಸಿ 2
36 401ಆರ್ ಯಲಹಂಕ ಬಿಇಎಂಎಲ್- ಲೇಔಟ್ 5ನೇ ಹಂತ 1
37 402ಡಿ ಮೆಜೆಸ್ಟಿಕ್- ಯಲಹಂಕ ನ್ಯೂಟೌನ್ 5ನೇ ಹಂತ 2
38 410ಎಫ್ಎ ಬನಶಂಕರಿ ಟಿಟಿಎಂಸಿ- ಯಶವಂತಪುರ ಟಿಟಿಎಂಸಿ 1
39 500ಡಿ ಹೆಬ್ಬಾಳ ಸೆಂಟ್ರಲ್- ಸಿಲ್ಕ್ ಬೋರ್ಡ್ 2
40 500ಡಿಪಿ ಗೊರಗುಂಟೆಪಾಳ್ಯ- ಸೆಂಟ್ರಲ್ ಸಿಲ್ಕ್ ಬೋರ್ಡ್ 1
41 501ಎಲ್ ಕೊಟ್ಟಿಗೆ ಪಾಳ್ಯ- ಕೆಆರ್ ಪುರಂ ರೈಲ್ವೆ ನಿಲ್ದಾಣ 1
42 502ಸಿಟಿ ಗೊರಗುಂಟೆಪಾಳ್ಯ- ಕೆಆರ್ ಪುರಂ ರೈಲ್ವೆ ನಿಲ್ದಾಣ 1
43 600ಎಫ್ ಬನಶಂಕರಿ ಟಿಟಿಎಂಸಿ- ಅತ್ತಿಬೆಲೆ 3
44 ಜಿ-07 ಮೆಜೆಸ್ಟಿಕ್- ಜನಪ್ರಿಯ ಟೌನ್ಶಿಪ್ 2
45 ಕೆ-02 ಹೆಬ್ಬಾಳ- ಮೈಸೂರು ರಸ್ತೆ ಬಸ್ ನಿಲ್ದಾಣ 1
46 ಕೆಬಿಎಸ್-12ಹೆಚ್ಕೆ ಮೆಜೆಸ್ಟಿಕ್- ಹೊಸಕೋಟೆ 1
47 ಕೆಬಿಎಸ್-1ಕೆ ಮೆಜೆಸ್ಟಿಕ್- ಕಾಡುಗೋಡಿ 2
48 ಕೆಬಿಎಸ್-3ಎ ಮೆಜೆಸ್ಟಿಕ್- ಅತ್ತಿಬೆಲೆ 6
Kshetra Samachara
16/11/2021 11:19 am