ಬೆಂಗಳೂರು: ಬಸ್ ಗಳ ಪೂಜೆಗೆ ಸಾರಿಗೆ ಇಲಾಖೆ ನೌಕರರಿಗೆ 100 ರೂಪಾಯಿ ನೀಡಿದೆ. ಕಚೇರಿಯ ಕಾರ್ ಮತ್ತು ಜೀಪ್ ಗೆ 40 ರೂಪಾಯಿ ಕೊಟ್ಟಿದೆ. ಅಲ್ಲಿಗೆ ಈ ಸುದ್ದಿ ಇಡೀ ದಿನ ಚರ್ಚೆಗೆ ಗ್ರಾಸವಾಗಿದೆ.
ಲಕ್ಷ ಲಕ್ಷ ದುಡಿದು ಕೊಡುವ ಬಸ್ ಗಳ ಪೂಜೆಗೆ ಕೇವಲ 100 ರೂಪಾಯಿಯೇ. ಈ ಪ್ರಶ್ನೆಗಳನ್ನ ಸಾರಿಗೆ ನೌಕರರು ಕೇಳುತ್ತಿದ್ದಾರೆ. ಬಸ್ ಕಥೆ ಏನೋ ಈ ರೀತಿ ಇದೆ. ಆದರೆ, ಸರ್ಕಾರಿ ಕಚೇರಿಯ ಕಾರ್ ಮತ್ತು ಜೀಪ್ ಗಳ ಪೂಜೆಗೆ ಎಷ್ಟು ದುಡ್ಡು ಕೊಟ್ಟಿದ್ದಾರೆ ಗೊತ್ತೇ ? ಕೇವಲ 40 ರೂಪಾಯಿಗಳು ಮಾತ್ರ. ಅಲ್ಲಿಗೆ ಯಾವ ನೌಕರ ಮಾರುಕಟ್ಟೆಗೆ ಹೋಗಿ ಹೂವು ಹಣ್ಣು ತರುತ್ತಾನೇ ಹೇಳಿ. ಹೀಗೆ ಪ್ರಶ್ನೆ ಮಾಡ್ತಿದ್ದಾರೆ ಸಾರಿಗೆ
ನೌಕರರು.
Kshetra Samachara
14/10/2021 07:21 pm