ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಹಲವೆಡೆ ಇಂದು ವ್ಯತ್ಯಯ: ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯ ರಾಜಧಾನಿಯ ಮಂದಿಗೆ ಕರ್ಫ್ಯೂ ಎಫೆಕ್ಟ್ ತಟ್ಟಿದೆ. ಹಾಯಾಗಿ ಮನೆಯಲ್ಲಿ ಟಿ.ವಿನ ನೋಡಿಕೊಂಡು ಕಾಲ ಕಳೆದರಾಯಿತು ಎಂದುಕೊಂಡಿದ್ದ ಮಂದಿಗೆ ಬೆಸ್ಕಾಂ ನಿರಾಸೆ ಮೂಡಿಸಿದೆ. ಇಂದು ಭಾನುವಾರ ಹಾಗೂ ನಾಳೆ ಸೋಮವಾರ ನಗರದ ಬಹುತೇಕ ಕಡೆಗಳಲ್ಲಿ ಪವರ್ ಕಟ್ ಆಗಲಿದೆ.

ಇಂದು ಪವರ್ ಕಡಿತವಾಗಲಿರುವ ಪ್ರದೇಶಗಳು ಹೀಗಿವೆ...ಬೆಂಗಳೂರು ದಕ್ಷಿಣ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗುರಪಾನಪಾಳ್ಯ ಮತ್ತು ಬಿಸಿಮಲ್ಲನಗರ ಜೆಸಿ ಇಂಡಸ್ಟ್ರಿಯಲ್ ಲೇಔಟ್, ವಿಟ್ಟಲ್ ನಗರ, ಮಾರುತಿ ಲೇಔಟ್, ಜಯನಗರ 50 ಅಡಿ ರಸ್ತೆ, ಕುಮಾರಸ್ವಾಮಿ ಲೇಔಟ್‌ನಲ್ಲಿ ಪವರ್​ ಇರೋಲ್ಲ. ಇನ್ನು ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಬಿಸಿಐ ಎಸ್ಟೇಟ್ ಇಂಡಸ್ಟ್ರಿಯಲ್ ಏರಿಯಾ, ಉದಯ್ ನಗರ ಮತ್ತು ಕೆಜಿ ಪುರ ಮುಖ್ಯರಸ್ತೆಯಲ್ಲಿ ವಿದ್ಯುತ್ ಕಡಿತವಾಗಲಿದೆ. ಉತ್ತರ ವಲಯದಲ್ಲಿ ಕಲಾನಗರದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಮತ್ತು ಎಚ್‌ಎಂಟಿ ಲೇಔಟ್, ನೆಲಗೇದರನಹಳ್ಳಿ ಮತ್ತು ಶಿವಪುರದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಪಶ್ಚಿಮ ವಲಯ: ಬೆಂಗಳೂರು ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಸಂತಪುರ ಮುಖ್ಯ ರಸ್ತೆ, ಜೆಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ, ಕಿಮ್ಸ್ ಕಾಲೇಜು ಸುತ್ತಮುತ್ತ, ಬನಶಂಕರಿ 2ನೇ ಹಂತ, ಚನ್ನಮನಕೆರೆ ಅಚ್ಚುಕಟ್ಟು, ಜೆಪಿ ನಗರ 2ನೇ ಹಂತ, ಜೆಪಿ ನಗರ 3ನೇ ಹಂತ, ಜೆಪಿ ನಗರ 4ನೇ ಹಂತ, ಜೆಪಿ ನಗರ 5ನೇ ಹಂತ, ಡಾಲರ್ಸ್ ಲೇಔಟ್, ದೊರೆಸಾನಿ ಪಾಳ್ಯ, ಮಾ. ರಸ್ತೆ, ಕತ್ರಿಗುಪ್ಪೆ ಗ್ರಾಮ, ಐಟಿಪಿಎಲ್ ಮುಖ್ಯರಸ್ತೆ, ಬೇಗೂರು ಮುಖ್ಯರಸ್ತೆ, ಬಿಟಿಎಂ 4ನೇ ಹಂತ, ಬಿಡಿಎ ಮೊದಲ ಹಂತ, ಬಿಡಿಎ 8ನೇ ಹಂತ, ಎಂಎಸ್ ರಾಮಹೈ ನಗರ, ಸುರಭಿ ನಗರ, ಸಿಂಗಸಂದ್ರ, ಪೊಲೀಸ್ ಕ್ವಾರ್ಟರ್ಸ್, ಯೂನಿಟಿ ಬಿಲ್ಡಿಂಗ್, ಟೌನ್ ಹಾಲ್, ರವೀಂದ್ರ ಕಲಾಕ್ಷೇತ್ರ, ಜಾರಗನಹಳ್ಳಿ, ಕೃಷ್ಣ ದೇವರಾಯ ನಗರ, ಬಿಕಿಸಿಪುರ, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಕನಕ ಲೇಔಟ್, ಗೌಡನಪಾಳ್ಯ, ಸಮೃದ್ಧಿ ಲೇಔಟ್, ವಿಟ್ಲ ನಗರ, ವಸಂತ ನಗರ, ಸಾರಾ ವಲ್ಲಬ ನಗರ ಸೇರಿವೆ. ಕಸವನಹಳ್ಳಿ ಮುಖ್ಯರಸ್ತೆಯಲ್ಲಿ ವಿದ್ಯುತ್​ ವ್ಯತ್ಯಯ ಇರಲಿದೆ.

ಉತ್ತರ ವಲಯ: ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ವಿದ್ಯುತ್ ಕಡಿತವಾಗಲಿದೆ. ಬಾಧಿತ ಪ್ರದೇಶಗಳಲ್ಲಿ ರಾಜಾಜಿನಗರ, ನೀಲಗಿರಿ ಪಾಪಣ್ಣ ಬ್ಲಾಕ್, ಬಿಇಎಲ್ ಸೌತ್ ಕಾಲೋನಿ, ಬಿಇಎಲ್ ನಾರ್ತ್ ಕಾಲೋನಿ, ಕೆನರಾ ಬ್ಯಾಂಕ್ ಲೇಔಟ್ ಭಾಗ, ಕೆಂಪೇಗೌಡ ನಗರ, ಯಲಹಂಕ ಓಲ್ಡ್ ಟೌನ್, ಶೇಟಿಹಳ್ಳಿ, ಮಲ್ಲಸಂದ್ರ, ಟಿ ದಾಸರಹಳ್ಳಿ, ನೃಪತುಂಗ ರಸ್ತೆ, ಮಲ್ಲಸಂದ್ರ, ಕಲ್ಯಾಣ ನಗರ ಸುತ್ತಮುತ್ತ, ಮಹಾಲಕ್ಷ್ಮಿ ಪುರಂ ನಂದಿನಿ ಲೇಔಟ್ ಇದೆ.

ಪಶ್ಚಿಮ ವಲಯ: ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್‌ ಕಡಿತವಾಗಲಿದೆ. ಹನುಮಂತನಗರ, ಚನ್ನಸಂದ್ರ, ಗಂಗೊಂಡನ ಹಳ್ಳಿ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕಾ ಲೇಔಟ್, ಬಿಎಚ್‌ಇಎಲ್ ಲೇಔಟ್, ಹರ್ಷಾ ಲೇಔಟ್, ವಿದ್ಯಾಪೀಠ ರಸ್ತೆ, ಡಿ ಗ್ರೂಪ್ ಲೇಔಟ್, ಅಂದ್ರಹಳ್ಳಿ ಮುಖ್ಯರಸ್ತೆ, ಗಾಂಧಿ ನಗರ, ದುಬಾಸಿಪಾಳ್ಯ ಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

Edited By : Nagaraj Tulugeri
Kshetra Samachara

Kshetra Samachara

09/01/2022 11:13 am

Cinque Terre

590

Cinque Terre

0

ಸಂಬಂಧಿತ ಸುದ್ದಿ