ಬೆಂಗಳೂರು: ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ವಿಶಾಲವಾದ ಪ್ರಯಾಣಿಕರ ವಿಮಾನ ಎ– 380 ಶೀಘ್ರದಲ್ಲೇ ಬೆಂಗಳೂರಿಗೆ ಬರಲಿದೆ.
ಅಕ್ಟೋಬರ್ 30ರಿಂದ ಎಮಿರೆಟ್ಸ್ ಜಂಬೊ ಜೆಟ್(79.8 ಮೀಟರ್ ಉದ್ದ) ವಿಮಾನ ದುಬೈ ಮತ್ತು ಬೆಂಗಳೂರು ನಡುವೆ ಸಂಚರಿಸಲಿದೆ. ಇದು ಅಕ್ಟೋಬರ್ 30ರ ರಾತ್ರಿ 9.25 ಹೊರಟು ಬೆಂಗಳೂರಿಗೆ ಬೆಳಗಿನ ಜಾವ 2.30ರ ಸುಮಾರಿಗೆ ಬರಲಿದೆ. ಈ ಹಿನ್ನಲೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋಡ್ ‘ಎಫ್’ಗೆ ಅನುಗುಣವಾಗಿ ಈ ವಿಮಾನ ಇಳಿಸುವ ರನ್‌ವೇ ಅಣಿಗೊಳಿಸಲಾಗುತ್ತಿದೆ. ದುಬೈನಿಂದ
ಬೋಯಿಂಗ್ ಪ್ರಯಾಣಿಕರ ವಿಮಾನ ಮಾತ್ರ ‘ಎಫ್’ ಕೋಡ್ ಹೊಂದಿದ್ದ ಪ್ರಯಾಣಿಕ ವಿಮಾನವಾಗಿತ್ತು. ಎ 380 ಡಬಲ್ ಡೆಕರ್ ವಿಮಾನವಾಗಿದ್ದು, ಇದರಲ್ಲಿ 500ಕ್ಕೂ ಹೆಚ್ಚು ಜನರು ಪ್ರಯಾಣಿಸಬಹುದು. ಮುಂಬೈ ಮತ್ತು ದೆಹಲಿ ಬಿಟ್ಟರೆ ಜಂಬೊ ಜೆಟ್ ವಿಮಾನ ಸಂಚಾರಕ್ಕೆ ಸಾಕ್ಷಿಯಾಗಲಿರುವ ದೇಶದ ಮೂರನೇ ನಗರ ಬೆಂಗಳೂರು ಎನಿಸಿಕೊಳ್ಳಲಿದೆ.
PublicNext
17/08/2022 07:37 am