ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಿರಿದಾದ ಕಟ್ಟಡದಲ್ಲೇ ಬ್ಯಾಂಕ್ ಕಾರ್ಯಾಚರಣೆ: ಗ್ರಾಹಕರ ಪಾಡಂತೂ ನಿಜಕ್ಕೂ ಶೋಚನೀಯ

ದೊಡ್ಡಬಳ್ಳಾಪುರ: ಇದು 40 ವರ್ಷಗಳ ಹಿಂದೆ ಪ್ರಾರಂಭವಾದ ಬ್ಯಾಂಕ್. ಇಲ್ಲಿ ಸುಮಾರು 40 ಸಾವಿರ ಖಾತೆದಾರರ ಅಕೌಂಟ್ ಇದೆ. ನಿತ್ಯ ಸಾವಿರಕ್ಕೂ ಹೆಚ್ಚು ಜನ ಬ್ಯಾಂಕ್ ಗೆ ಭೇಟಿ ನೀಡ್ತಾರೆ. ಆದ್ರೆ ಕಿರಿದಾದ ಕಟ್ಟಡದಲ್ಲಿ ನಾಲ್ಕೈದು ಜನ ಒಳ ಹೋದರೆ ಸಾಕು ಉಳಿದವರು ರಸ್ತೆಯಲ್ಲೇ ಇರಬೇಕಾದ ಸ್ಥಿತಿ ಇದೆ.

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದ ಕಾರ್ಪೋರೇಶನ್ ಬ್ಯಾಂಕ್, ಸುತ್ತಮುತ್ತಲಿನ ರೈತರು ಮತ್ತು ಮಹಿಳೆಯರ ಹಣಕಾಸಿನ ವ್ಯವಹಾರಕ್ಕೆ ಆಸರೆಯಾಗಿದೆ. ಸದ್ಯ ಕಾರ್ಪೋರೇಶನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಗಿ ಬದಲಾಗಿದೆ. ದೊಡ್ಡಬೆಳವಂಗಲದಲ್ಲಿ ಇರುವ ಏಕೈಕ ಬ್ಯಾಂಕ್ ಇದು.. ಕಳೆದ 40 ವರ್ಷಗಳಿಂದ ಕಿರಿದಾದ ಕಟ್ಟಡದಲ್ಲಿಯೇ ಯೂನಿಯನ್ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಕೂರಲು ಕುರ್ಚಿ, ಶೌಚಾಲಯದ ವ್ಯವಸ್ಥೆ ಯಾವುದೂ ಇಲ್ಲ. ಸಣ್ಣದೊಂದು ಬ್ಯಾಂಕ್ ವ್ಯವಹಾರಕ್ಕೆ ಹೋದರೆ ಇಡೀ ದಿನ ಬ್ಯಾಂಕ್ ನಲ್ಲೇ ಕಳೆಯಬೇಕು. ಪಾರ್ಕಿಂಗ್ ವ್ಯವಸ್ಥೆ ಸಹ ಇಲ್ಲ. ಯೂನಿಯನ್ ಬ್ಯಾಂಕ್ ಅನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡುವಂತೆ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ನಿರತ ಕಾರ್ಯಕರ್ತರ ಮನವಿ ಸ್ವೀಕರಿಸಿ ಮಾತನಾಡಿದ ಬ್ಯಾಂಕ್ ಮ್ಯಾನೇಜರ್ ಹರಿನಾಥ್, ಬ್ಯಾಂಕ್ ಸ್ಥಳಾಂತರಕ್ಕೆ ಈಗಾಗಲೇ ರೀಜನಲ್ ಬ್ಯಾಂಕ್ ಮ್ಯಾನೇಜರ್ ಗೆ ಪತ್ರ ಬರೆಯಲಾಗಿದ್ದು, ಮುಂಬೈ ನಿಂದ ನಮಗೆ ಆದೇಶ ಬಂದಾಗ ಮಾತ್ರ ಬ್ಯಾಂಕ್ ಸ್ಥಳಾಂತರ ಮಾಡಲು ಸಾಧ್ಯ. ಬ್ಯಾಂಕ್ ಸ್ಥಳಾಂತರಿಸಲು ಸೂಕ್ತವಾದ ಕಟ್ಟಡ ಸಿಗದೇ ಇರುವುದು ಸಹ ವಿಳಂಬಕ್ಕೆ ಕಾರಣವಾಗಿದೆ. 6 ತಿಂಗಳ ಒಳಗೆ ಹೊಸ ಕಟ್ಟಡಕ್ಕೆ ಬ್ಯಾಂಕ್ ಸ್ಥಳಾಂತರಗೊಳ್ಳಲಿದೆ ಎಂದು ಭರವಸೆ ನೀಡಿದರು.

ವೃದ್ದಾಪ್ಯ, ಪಿಂಚಣಿ, ವಿಶೇಷಚೇತನರ ವೇತನ, ಹಾಲಿನ ಪ್ರೋತ್ಸಾಹ ಬೆಲೆಯ ಹಣವನ್ನ ಪಡೆಯಲು ನಿತ್ಯ ಸಾವಿರಾರು ಮಂದಿ ಬ್ಯಾಂಕ್ ಗೆ ಬರ್ತಾರೆ. ಆದಷ್ಟು ಬೇಗ ಇಲ್ಲಿನ ಸಮಸ್ಯೆ ಬಗೆಹರಿಸಿ ಗ್ರಾಹಕರಿಗೆ ಅನುಕೂಲ ಮಾಡಬೇಕು ಅಂತ ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.

Edited By :
PublicNext

PublicNext

09/05/2022 08:07 pm

Cinque Terre

31.31 K

Cinque Terre

0

ಸಂಬಂಧಿತ ಸುದ್ದಿ