ಬೆಂಗಳೂರು : ಬೆಂಗಳೂರಿಗರಿಗೆ ಬೆಳ್ಳಂಬೆಳಗ್ಗೆ ವರುಣರಾಯನ ದರ್ಶನವಾಗ್ತಿದೆ. ರಾತ್ರಿ 1 ಗಂಟೆ ಸುಮಾರಿಗೆ ಪ್ರಾರಂಭವಾದ ಮಳೆ ಇನ್ನೂ ಸಹ ಬಿಟ್ಟಿಲ್ಲ. ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ಹಳ್ಳ- ಕೊಳ್ಳಗಳು ತುಂಬಿ ಕೋಡಿ ಬಿದ್ದು ರಸ್ತೆಗೆ ನೀರು ನುಗ್ಗುತ್ತಿದೆ.
ಕುಂಬಳಗೋಡಿನ ಕಣ್ಮಿಕೆ ಕೆರೆ, ಸೀಗೆಹಳ್ಳಿಯ ಕೆರೆ, ರಾಮೂಹಳ್ಳಿ ಕೆರೆ, ಕೆಂಚನಪುರ ಕೆರೆ, ವೃಷಭಾವತಿಯ ಕೊಳಚೆ ನೀರು ಈಗಾಗ್ಲೆ ರಸ್ತೆಗಳಿಗೆ ನುಗ್ಗುವುದಲ್ಲದೆ ಗ್ರಾಮಗಳನ್ನ ಆವರಿಸಿದೆ. ಗ್ರಾಮದ ಜನ ಎಚ್ಚೆತ್ತು ಊರಿನ ಎತ್ತರದ ಜಾಗಕ್ಕೆ ಹೋಗಬೇಕು ಯಾರು ಕೆರೆಯ ಆಸುಪಾಸು ಓಡಾಡಬಾರದು.
ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಬಹಳವೇಗ ವಾಗಿ ನೀರು ಬರುತ್ತಿದೆ ಕೊಚ್ಚಿಕೊಂಡು ಹೋಗಬಹುದು. ಕೆರೆಯ ಹತ್ತಿರಾ ಹೋಗಬೇಡಿ ಈಗಾಗ್ಲೆ ಕುಂಬಳಗೋಡಿನ ತೊರೆತುಂಬಿದೆ. ಯಾರು ಕೆಲಸಕ್ಕೆ ಟೈಂ ಆಗಿದೆ ಎಂದು ಆ ರಸ್ತೆಯನ್ನ ಬಳಸಬೇಡಿ. ಮಾರ್ಗವನ್ನ ಬದಲಾಯಿಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ರಸ್ತೆ ಕುಂಬಳಗೋಡಿನಿಂದ ಬಿಡದಿಯವರೆಗೂ ರಸ್ತೆ ಪೂರ್ತಿ ಮುಳುಗಡೆಯಾಗಿದೆ. ಕಾರುಗಳು ತೇಲುತ್ತಿವೆ. ಸದ್ಯ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇನ್ನೂ ಈ ಮಳೆ ಹೀಗೆ ಸುರಿಯುತ್ತಿದ್ದರೆ. ಬೆಳೆ ನಾಶವಾದ ಹಾಗೆ ಹಳ್ಳಿಯ ಮನೆಗಳು ಸಂಪೂರ್ಣ ಜಲಾವೃತವಾಗೋದ್ರಲ್ಲಿ ಡೌಟ್ ಇಲ್ಲದಂತ್ತಾಗಿದೆ.ಸಿಲಿಕಾನ್ ಸಿಟಿಯ ತಗ್ಗು ಪ್ರದೇಶದಲ್ಲಿ ಮನೆ ಕಟ್ಟಿಕೊಂಡ ಜನರಂತು ಪ್ರಾಣ ಉಳಿಸಿಕೊಂಡರೆ ಸಾಕು ಎಂದು ಟೆರಸ್ ಏರಿ ನಿಲ್ಲುವಂತಾಗಿದೆ.
PublicNext
29/08/2022 01:13 pm