ಯಲಹಂಕ: ದೇವನಹಳ್ಳಿ ಏರ್ಪೋರ್ಟ್ ದಕ್ಷಿಣಕ್ಕೆ ಹೊಂದಿಕೊಂಡ ಬಂಡಿಕೊಡಿಗೇಹಳ್ಳಿ ಸುತ್ತಮುತ್ತಲ KIADB ಪ್ರದೇಶದ ಹತ್ತಾರು ಕೆರೆಗಳು ಕೋಡಿ ಹರಿಯುತ್ತಿವೆ. ಇದರ ಪರಿಣಾಮ ಸಿಂಗಹಳ್ಳಿ, ಅರೆಬನ್ನಿಮಂಗ್ಲ ಕೊಂಡೇನಹಳ್ಳಿ, ಕಗ್ಗಲಹಳ್ಳಿ, ಗಂಗವಾರ, ಚೌಡಪನಹಳ್ಳಿ, ಬೂದಿಗೆರೆ
ಹೀಗೆ ರಾಜಕಾಲುವೆ & ಕೆರೆ ಅಚ್ಚುಕಟ್ಟು ಪ್ರದೇಶಗಳಿಗೆ ಹೊಂದಿಕೊಂಡಿರುವ ನೂರಾರು & ಸಾವಿರಾರು ಎಕರೆ ಪ್ರದೇಶದ ಹೂವು, ಹಣ್ಣು, ತರಕಾರಿ & ವಾಣಿಜ್ಯ ಬೆಳಗಳು ನಾಶವಾಗಿವೆ. ರೈತ ಮಳೆಯಿಂದ ಖುಷಿಯಾಗಿದ್ದರೆ, ಬೆಳೆನಾಶದಿಂದ ಕಂಗಾಲಾಗಿದ್ದಾನೆ. ಈ ಎಲ್ಲಾ ವಿಷಯ ಕುರಿತು ಬೂದಿಗೆರೆ ಕೆರೆಯ ಹಿನ್ನೀರಿನ ಬಳಿ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ.
PublicNext
06/09/2022 09:14 pm