ದೊಡ್ಡಬಳ್ಳಾಪುರ: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಘಾಟಿ ಸುಬ್ರಮಣ್ಯ ಬಳಿಯ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಮ್ ತುಂಬಿ ಹರಿಯುತ್ತಿದೆ. ನೀರಿನ ರಭಸಕ್ಕೆ ಘಾಟಿ ಕ್ಷೇತ್ರಕ್ಕೆ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋಗಿದೆ.
ಇನ್ನು ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಬರುವ ಭಕ್ತರು ಡ್ಯಾಮ್ ಗೆ ಭೇಟಿ ನೀಡುವರು. ಆದರೆ ಡ್ಯಾಮ್ ಬಳಿ ಯಾವುದೇ ಸುರಕ್ಷತೆ ವ್ಯವಸ್ಥೆಯನ್ನು ಮಾಡಿಲ್ಲ. ಹಾಗಾಗಿ ಡ್ಯಾಮ್ ನೋಡಲು ಬರುವ ಭಕ್ತರು ಎಚ್ಚರಿಕೆಯಿಂದ ಇರಬೇಕಿದೆ.
ಡ್ಯಾಮ್ ನಿಂದ ಹೊರ ಬರುವ ನೀರು ಉತ್ತರ ಪಿನಾಕಿನಿ ನದಿಯನ್ನ ಸೇರುತ್ತೆ. ಇದರ ಮಧ್ಯದಲ್ಲಿ ಘಾಟಿ ಕ್ಷೇತ್ರಕ್ಕೆ ಸಂಪರ್ಕಿಸುವ ಸೇತುವೆ ಇದ್ದು, ಕಳೆದ ರಾತ್ರಿಯ ಮಳೆಗೆ ಸೇತುವೆ ಕೊಚ್ಚಿ ಹೋಗಿದೆ. ಇದರಿಂದ ಗೌರಿಬಿದನೂರು ರಸ್ತೆ ಮತ್ತು ಘಾಟಿ ಸಂಪರ್ಕ ಕಡಿತಗೊಂಡಿದೆ. ಭಾರಿ ಮಳೆಯಾದಾಗ ಸೇತುವೆ ಕೊಚ್ಚಿ ಹೋಗುವುದು ಸಾಮಾನ್ಯವಾಗಿದೆ. ಸೇತುವೆಯ ಎತ್ತರವನ್ನ ಹೆಚ್ಚಿಸಿದಾಗ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗಲಿದೆ.
Kshetra Samachara
05/09/2022 05:15 pm